ಚಿಕ್ಕಬಳ್ಳಾಪುರ: ಒಂದು ಲಾರಿ ಲೋಡು ಜಲ್ಲಿ ಕಲ್ಲು ಬೇಕು, ಎಷ್ಟಾಗುತ್ತೆ? ಹಣವನ್ನು ಫೋನ್ ಪೇ ಮಾಡುತ್ತೇವೆ. ಕಳುಹಿಸಿದ ಲಿಂಕ್ ಕ್ಲಿಕ್ ಮಾಡಿ, ಹಣ ಚೆಕ್ ಮಾಡಿಕೊಳ್ಳಿ ಎಂದು ಅಪರಿಚಿತರು ಹೇಳಿದ ಮಾತನ್ನು ಕೇಳಿದ ಚಾಲಕ ಬ್ಯಾಂಕ್ ಖಾತೆಯಲ್ಲಿನ ಹಣವನ್ನು ಕಳೆದುಕೊಂಡಿದ್ದಾನೆ.
ಚಿಕ್ಕಬಳ್ಳಾಪುರ ತಾಲೂಕಿನ ಚಾಲಕ ಅರುಣ್ ಕುಮಾರ್ (34) ವಂಚನೆಗೊಳಗಾದವರು ನಿಮ್ಮ ಲಾರಿಯ ಮೇಲೆ ಹಾಕಿರುವ ಪೋನ್ ನಂಬರ್ ನ್ನು ತೆಗೆದುಕೊಂಡು ಮಾತನಾಡಲಾಗುತ್ತಿದೆ. ನಾನು ಮಿಲ್ಟಿಯಲ್ಲಿದ್ದು ಚಿಕ್ಕಬಳ್ಳಾಪುರ ರೈಲ್ವೆ ಫ್ಲಾಟ್ ಫಾರಂ ಅಭಿವೃದ್ಧಿಪಡಿಸಲು 20 ಎಂ ಎಂ ಅಳತೆಯ ಜೆಲ್ಲಿ ಒಂದು ಲೋಡ್ ಬೇಕು. ನಮ್ಮ ಅಕೌಂಟೆಂಟ್ ಹೇಳಿದಂತೆ ಕೇಳಿ ಎಂಬುದಾಗಿ ಯಾರೂ ವಂಚಕರು ಮೊಬೈಲ್‌ಗೆ ಕರೆ ಮಾಡಿ, ತಿಳಿಸಿದ್ದಾರೆ. ಅದರಂತೆ ಬಳಿಕ ಮತ್ತೊರ್ವ ವ್ಯಕ್ತಿ ಫೋನ್ ಮಾಡಿ, ನನ್ನ ಹೆಸರು ರಮೇಶ್, ಮಿಲ್ಟ್ರಿ ಅಕೌಂಟೆಂಟ್. ಒಂದು ಕ್ಯೋಆರ್ ಕೋಡ್ ಕಳುಹಿಸುತ್ತೇನೆ. ಅದನ್ನು ಸ್ಕಾನ್ ಮಾಡಿ ಅಂತ ತಿಳಿಸಿದ್ದಾನೆ. ಹಾಗೆಯೇ ಮಾಡಿದ ತಕ್ಷಣ ಹಣ ಪಾವತಿಯ ಸಂದೇಶ ಸಿಕ್ಕಿದೆ. ಇದನ್ನು ನಂಬಿ ಪ್ರೋಸಿಜರ್ ಪಿನ್ ನಂಬರ್ ನ್ನು ಹಾಕಿ ಸಬ್ಮಿಟ್ ಕೊಡುತ್ತಿದ್ದಂತೆ ಖಾತೆಯಿಂದ ಎರಡು ಬಾರಿ 20900 ಮತ್ತು 24883 ಸೇರಿದಂತೆ 45883 ರೂ ಕಡಿತಗೊಂಡಿದೆ. ಇದರಿಂದ ವಂಚನೆಗೊಳಾಗಿರುವುದು ಗೊತ್ತಾಗುತ್ತಿದ್ದಂತೆ ಚಾಲಕ ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ.
ಇತ್ತೀಚೆಗೆ ಪ್ರತಿನಿತ್ಯ ಆಸೆ ಆಮಿಷಗಳನ್ನೊಡುವುದು, ಅಧಿಕಾರಿಗಳ ಹೆಸರು ಹೇಳುವುದು, ವಹಿವಾಟು ನಡೆಸುವ ನೆಪದಲ್ಲಿ ಮೊಬೈಲ್ ಗೆ ಕರೆ ಮಾಡಿ, ನಯವಾದ ಮಾತುಗಳಿಂದ ವಂಚಿಸಿ ಹಣ ಲಪಟಾಯಿಸುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇದರ ನಡುವೆ ವಂಚಕರು ಪತ್ತೆಯಾಗುತ್ತಿಲ್ಲ. ವಂಚನೆಯ ಪ್ರಕರಣಗಳು ನಿಲ್ಲುತ್ತಿಲ್ಲ. ಇದಕ್ಕೆ ಜನರು ಎಚ್ಚರಿಕೆಯಿಂದ ಇರಬೇಕಾಗಿದೆ.