ಆನೇಕಲ್: ಬೆಂಗಳೂರು ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ವಿಶ್ವ ವನ್ಯಜೀವಿ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕೆಎಫ್‌ಡಿಸಿ ನಿರ್ದೇಶಕಿ ಭಾಗ್ಯವತಿ ಅವರೇಶ್, ವಿಶ್ವ ವನ್ಯಜೀವಿ ನಿಧಿಯ ಸೌಂದರ್ಯವಲ್ಲಿ, ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್ ಸಿಂಗ್ ಸಸಿಗಳನ್ನು ನೆಟ್ಟರು.
ವಿವಿಧ ಸ್ಪರ್ಧೆಗಳು: ವನ್ಯಜೀವಿ, ಪರಿಸರ ಸಂರಕ್ಷಣೆ ಮಾಹಿತಿ ಇರುವ ಚಿತ್ರಕಲೆ, ಭೂಮಿ ಮೇಲೆ ಮನುಷ್ಯನ ಉಳಿವಿನ ಕುರಿತಾದ ಭಿತ್ತಿಚಿತ್ರ ರಚನೆ ಹಾಗೂ ಅರಣ್ಯದೊಂದಗಿನ ಸಹಬಾಳ್ವೆ ವಿಷಯವಾಗಿ ಎರಡು ನಿಮಿಷಗಳ ಅವಧಿಯ ಕಿರುಭಾಷಣ ಸ್ಪರ್ಧೆಗಳನ್ನು ಒಂದನೇ ತರಗತಿಯಿಂದ ಎಂಟನೇ ತರಗತಿ ವಿದ್ಯಾರ್ಧಿಗಳಿಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಆಯೋಜಿಸಲಾಗಿದೆ.