ಜಿಲ್ಲೆ

ವಿದ್ಯಾರ್ಥಿಗಳಿಗೆ ಅಶ್ಲೀಲಚಿತ್ರ ಕಳಿಸಿದ ಉಪನ್ಯಾಸಕ! ಆನ್​ಲೈನ್​ ಪಾಠದ ವೇಳೆ ಅವಾಂತರ, ಮುಂದೇನಾಯ್ತು?

arunakunigal

ಕೆ.ಆರ್​.ಸಾಗರ(ಮೈಸೂರು): ಆನ್​ಲೈನ್​ ಪಾಠ ಮಾಡುತ್ತಿದ್ದ ಉಪನ್ಯಾಸಕನೊಬ್ಬ ವಾಟ್ಸ್​ಆ್ಯಪ್​ ಗ್ರೂಪಿಗೆ ಸಿಲೆಬಸ್​ ಕಳುಹಿಸುವ ಜತೆಗೆ ಅಶ್ಲೀಲ ಚಿತ್ರವನ್ನೂ ಕಳುಹಿಸಿದ್ದು, ವಿದ್ಯಾರ್ಥಿಗಳು ಮುಜುಗರಕ್ಕೊಳಗಾದ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.

ಕೆ.ಆರ್​.ಸಾಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ ವಿಭಾಗದಲ್ಲಿ ಅತಿಥಿ ಉಪನ್ಯಾಸಕ ಮೂರ್ತಿ ಎಂಬುವವರೇ ಈ ಪ್ರಮಾದವೆಸಗಿದ್ದು. ಇವರು ಕೆಲ ವರ್ಷಗಳಿಂದ ಈ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಸೋಮವಾರ ವಿದ್ಯಾರ್ಥಿಗಳಿಗೆ ಆನ್​ಲೈನ್​ ಪಠ್ಯ ಕಳುಹಿಸುವ ಜತೆಗೆ ಅಶ್ಲೀಲ ಚಿತ್ರವನ್ನೂ ಉಪನ್ಯಾಸಕ ಕಳುಹಿಸಿದ್ದ.

ವಾಟ್ಸ್ಆ್ಯಪ್​ ಗ್ರೂಪ್​ಗೆ ಉಪನ್ಯಾಸಕನಿಂದ ಅಶ್ಲೀಲ ಚಿತ್ರ ಬಂದ ಬಗ್ಗೆ ಗ್ರೂಪಿನಲ್ಲಿದ್ದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಪ್ರಾಂಶುಪಾಲರ ಗಮನಕ್ಕೆ ತಂದರು. ನಂತರ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಜತೆ ಚರ್ಚಿಸಿದ ಪ್ರಾಂಶುಪಾಲೆ ಹಂಸವೇಣಿ ಅವರು ಅತಿಥಿ ಉಪನ್ಯಾಸಕ ಮೂರ್ತಿಯನ್ನು ಸೇವೆಯಿಂದ ಬಿಡುಗಡೆಗೊಳಿಸಿದ್ದಾರೆ.