ಜಿಲ್ಲೆ

ತೆಂಗು ಬೆಳೆಗಾರರಿಗೆ ಒನ್​ರೂಟ್​ ವರದಾನ: ರೈತರು ಹಾಗೂ ಖರೀದಿದಾರರ ನಡುವೆ ಸಂಪರ್ಕ ಸೇತು! OneRoot

OneRoot : ಮಧ್ಯವರ್ತಿಗಳ ಹಾವಳಿ ಇಲ್ಲ, ಬೆಂಬಲ ಬೆಲೆಗೆ ಮೋಸವಿಲ್ಲ, ರೈತ ಹಾಗೂ ಖರೀದಿದಾರರ ನಡುವೆ ಯಾವುದೇ ಮುಚ್ಚುಮರೆ ಇಲ್ಲ. ವಹಿವಾಟಿಗೆ ಯಾರ ಅಡ್ಡಿ ಆತಂಕವೂ ಇಲ್ಲ....! ಎಲ್ಲವೂ ಪಾರದರ್ಶಕ ಹಾಗೂ ನಿಖರ.

ಇದುವೇ ಒನ್​ರೂಟ್ ಬ್ರ್ಯಾಂಡ್​ನ ‘ಮಾರ್​ಖೇಥ್’ (MARKHET) ಆ್ಯಪ್​ನ ವೈಶಿಷ್ಟ್ಯ. ಇಎನ್​ಪಿ ಫಾರ್ಮ್ಸ್​ ಪ್ರೈ.ಲಿಮಿಡೆಡ್​ನ ಸಂಸ್ಥಾಪಕ ಭರತ್ ದಯಾನಂದರೆಡ್ಡಿ ಅವರ ಕನಸಿನ ಕೂಸು ಈ ಮಾರ್​ಖೇಥ್ ಆ್ಯಪ್. ಇದೀಗ ತೆಂಗು ಬೆಳೆಗಾರರಿಗೆ ಆಸರೆಯಾಗಿದೆ. ಪ್ರಸ್ತುತ ಒನ್​ರೂಟ್ 500 ಖರೀದಿದಾರರನ್ನು ಒಟ್ಟುಗೂಡಿಸುವ ಮೂಲಕ 15 ಸಾವಿರಕ್ಕೂ ಹೆಚ್ಚು ರೈತರಿಗೆ ಬೆಂಬಲ ನೀಡುತ್ತಿದೆ ಮತ್ತು 2025-26ರ ಸಾಲಿನಲ್ಲಿ 3 ಸಾವಿರ ಖರೀದಿದಾರರನ್ನು ಈ ವೇದಿಕೆಗೆ ತಂದು 1 ಲಕ್ಷ ರೈತರಿಗೆ ಸೇವೆ ಸಲ್ಲಿಸುವ ಗುರಿ ಹೊಂದಿದೆ.

OneRoot : ಮಧ್ಯವರ್ತಿಗಳ ಹಾವಳಿ ಇಲ್ಲ, ಬೆಂಬಲ ಬೆಲೆಗೆ ಮೋಸವಿಲ್ಲ, ರೈತ ಹಾಗೂ ಖರೀದಿದಾರರ ನಡುವೆ ಯಾವುದೇ ಮುಚ್ಚುಮರೆ ಇಲ್ಲ. ವಹಿವಾಟಿಗೆ ಯಾರ ಅಡ್ಡಿ ಆತಂಕವೂ ಇಲ್ಲ....! ಎಲ್ಲವೂ ಪಾರದರ್ಶಕ ಹಾಗೂ ನಿಖರ.

ಇದುವೇ ಒನ್​ರೂಟ್ ಬ್ರ್ಯಾಂಡ್​ನ ‘ಮಾರ್​ಖೇಥ್’ (MARKHET) ಆ್ಯಪ್​ನ ವೈಶಿಷ್ಟ್ಯ. ಇಎನ್​ಪಿ ಫಾರ್ಮ್ಸ್​ ಪ್ರೈ.ಲಿಮಿಡೆಡ್​ನ ಸಂಸ್ಥಾಪಕ ಭರತ್ ದಯಾನಂದರೆಡ್ಡಿ ಅವರ ಕನಸಿನ ಕೂಸು ಈ ಮಾರ್​ಖೇಥ್ ಆ್ಯಪ್. ಇದೀಗ ತೆಂಗು ಬೆಳೆಗಾರರಿಗೆ ಆಸರೆಯಾಗಿದೆ. ಪ್ರಸ್ತುತ ಒನ್​ರೂಟ್ 500 ಖರೀದಿದಾರರನ್ನು ಒಟ್ಟುಗೂಡಿಸುವ ಮೂಲಕ 15 ಸಾವಿರಕ್ಕೂ ಹೆಚ್ಚು ರೈತರಿಗೆ ಬೆಂಬಲ ನೀಡುತ್ತಿದೆ ಮತ್ತು 2025-26ರ ಸಾಲಿನಲ್ಲಿ 3 ಸಾವಿರ ಖರೀದಿದಾರರನ್ನು ಈ ವೇದಿಕೆಗೆ ತಂದು 1 ಲಕ್ಷ ರೈತರಿಗೆ ಸೇವೆ ಸಲ್ಲಿಸುವ ಗುರಿ ಹೊಂದಿದೆ.

ರೈತನಿಗೆ ಯಾವುದೇ ಶುಲ್ಕವಿಲ್ಲ: ಈ ಆಪ್ ಮೂಲಕ ಕೃಷಿಕರು ಸುಲಭವಾಗಿ ವಹಿವಾಟು ನಡೆಸಬಹುದು, ಬೆರಳ ತುದಿಯಲ್ಲಿಯೇ ತಮ್ಮ ಉತ್ಪನ್ನಗಳಿಗೆ ಬೆಲೆ ಕಟ್ಟಬಹುದು. ಇದರ ನೋಂದಣಿಗೆ ಯಾವುದೇ ಶುಲ್ಕವಿಲ್ಲ. ಖರೀದಿದಾರರು ಚಂದಾದಾರರಾಗಬೇಕು, ತಿಂಗಳಿಗೆ ಇಂತಿಷ್ಟು ಚಂದಾ ಪಾವತಿಸಿ ಕುಳಿತಲ್ಲಿಂದಲೇ ವಹಿವಾಟು ನಡೆಸಬಹುದು. ಗುಣಮಟ್ಟಕ್ಕೆ ತಕ್ಕ ದರ ನೀಡಿ ರೈತರಿಂದ ನೇರವಾಗಿ ಖರೀದಿಸಬಹುದು. ದೇಶದ ಯಾವ ಮೂಲೆಯಲ್ಲಾದರೂ ಕುಳಿತು ವ್ಯವಹರಿಸಬಹುದಾದ ಸರಳ ವಿಧಾನ ಇದಾಗಿದೆ.

ಒನ್​ರೂಟ್ ಸಿಬ್ಬಂದಿ ನೆರವು: ಈ ಆಪ್ ನಿರ್ವಹಣೆಗೆ ದೊಡ್ಡ ಮಟ್ಟದಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಆಪ್ ಮೂಲಕ ಹೇಗೆ ವ್ಯವಹರಿಸಬಹುದು ಎಂಬುದರ ಸಂಪೂರ್ಣ ಮಾಹಿತಿಯನ್ನು ರೈತರಿಗೆ ನೀಡುತ್ತಾರೆ. ಇದಕ್ಕೆಂದೇ ಸಹಾಯವಾಣಿ ಇದೆ. ಆಯಾ ವ್ಯಾಪ್ತಿಯ ಸಿಬ್ಬಂದಿ ನೇರವಾಗಿ ರೈತರ ಜಮೀನುಗಳಿಗೆ ಭೇಟಿ ನೀಡಿ ರೈತರಿಗೆ ಸಲಹೆ ಸೂಚನೆ ನೀಡುತ್ತಾರೆ. ಫಸಲಿನ ಗುಣಮಟ್ಟ, ಯಾವಾಗ ಕಟಾವು ಮಾಡಬೇಕು? ಯಾವ ಸಮಯದಲ್ಲಿ ವ್ಯವಹರಿಸಿದರೆ ಲಾಭ? ಇನ್ನಿತರ ಸಂಪೂರ್ಣ ಮಾಹಿತಿ ನೀಡುತ್ತಾರೆ. ಇದಕ್ಕಾಗಿಯೇ ಇಎನ್​ಪಿ ಫಾರ್ಮ್ಸ್​ ಪ್ರೈ.ಲಿಮಿಟೆಡ್ ಕಂಪನಿ ಸರ್ವ ಸನ್ನದ್ಧವಾಗಿದ್ದು ರಾಜ್ಯದ ಮೂಲೆ ಮೂಲೆಗೆ ಪಸರಿಸುವತ್ತ ಹೆಜ್ಜೆ ಹಾಕುತ್ತಿದೆ.

ಪ್ರತಿ ವ್ಯವಹಾರ ಕ್ಷೇತ್ರದಲ್ಲೂ ತನ್ನದೇ ಆದ ಬೆಲೆ ನಿಗದಿಪಡಿಸಲು ಅದರ ಮಾಲೀಕರಿಗೆ ಹಕ್ಕಿರುತ್ತದೆ. ಆದರೆ ರೈತರ ಪಾಲಿಗೆ ಇದು ಕನಸಿನ ಮಾತಾಗಿತ್ತು. ಹಿಂದಿನಿಂದಲೂ ಇದಕ್ಕೆ ಅವಕಾಶವಿರಲಿಲ್ಲ. ಆದರೆ ನಮ್ಮ ಕಂಪನಿ ಮೂಲಕ ರೈತರಿಗೆ ಇಂಥ ಮಹತ್ವದ ಹಕ್ಕು ದೊರೆತಿದೆ. ರೈತನ ಸಂಪತ್ತು ದೇಶದ ಆರೋಗ್ಯ ಎಂದು ಒನ್​ರೂಟ್ ಬಲವಾಗಿ ನಂಬುತ್ತದೆ. 2023-24ರ ಸಾಲಿನಲ್ಲಿ ರೈತ ಸಬಲೀಕರಣದಲ್ಲಿ ಕಂಪನಿ ಸಾಧನೆ ಗುರುತಿಸಿ ಮತ್ತು ಭಾರತದ ಜಿಡಿಪಿಯನ್ನು ಬೆಂಬಲಿಸಿದ್ದಕ್ಕಾಗಿ ಸ್ಟಾರ್ಟ್​ಅಪ್ ಕರ್ನಾಟಕದಿಂದ 25 ಲಕ್ಷ ರೂ. ಅನುದಾನ ಪಡೆದಿರುವುದು ಒನ್​ರೂಟ್ ಹೆಗ್ಗಳಿಕೆಯಾಗಿದೆ. | ಭರತ್ ದಯಾನಂದ ರೆಡ್ಡಿ ಒನ್​ರೂಟ್ ಸಂಸ್ಥಾಪಕ

ಕ್ರಾಂತಿಕಾರಿ ವ್ಯಾಪಾರ ವೇದಿಕೆ

ಒನ್​ರೂಟ್ ಮಾರ್​ಖೇಥ್ ಅಪ್ಲಿಕೇಷನ್​ನೊಂದಿಗೆ, ‘ರೈತರು ಇನ್ನು ಮುಂದೆ ಇನ್ನೊಬ್ಬರಿಂದ ಬೆಲೆ ಪಡೆಯುವವರಲ್ಲ, ಅವರೇ ಅಂತಿಮವಾಗಿ ಬೆಲೆ ನಿರ್ಧರಿ ಸಲಿದ್ದಾರೆ’ ಎಂಬುದು ಕಂಪನಿ ಸಂಸ್ಥಾಪಕ ಭರತ್​ರೆಡ್ಡಿ ಅಚಲ ವಿಶ್ವಾಸ. ಈ ಆಪ್ ಸಹಾಯದಿಂದ ತೆಂಗಿನ ಮರದಲ್ಲಿನ ಎಳನೀರಿಗೆ ರೈತನೇ ದರ ನಿಗದಿ ಮಾಡಬಹುದು. ಈ ಹಿಂದೆ ಸುಮಾರು 20 ರಿಂದ 25 ರೂಪಾಯಿಗೆ ಮಾರಾಟವಾಗುತ್ತಿದ್ದ ಎಳನೀರು ಖರೀದಿ ದರ 50 ರೂಪಾಯಿ ದಾಟಿದೆ ಈ ಐತಿಹಾಸಿಕ ಬದಲಾವಣೆಗೆ ಬೆಂಗಳೂರು ಮೂಲದ ಅಗ್ರಿಟೆಕ್ ಕಂಪನಿಯಾದ ಒನ್​ರೂಟ್ ತನ್ನ ಕ್ರಾಂತಿಕಾರಿ ವ್ಯಾಪಾರ ವೇದಿಕೆ ಕಲ್ಪಿಸಿರುವುದೂ ಒಂದು ಕಾರಣ.

ರೈತನ ಇಷ್ಟಕ್ಕೆ ಬಿಟ್ಟಿದ್ದು

ಕಳೆದ ಮೂರ್ನಾಲ್ಕು ವರ್ಷದಲ್ಲಿ ತೆಂಗಿನ ಬೆಲೆ ಪಾತಾಳಕ್ಕಿಳಿದು ಬೆಳೆಗಾರರು ಕಂಗಾಲಾ ಗಿದ್ದರು. ಇದಕ್ಕೆ ಮಧ್ಯವರ್ತಿಗಳ ಹಾವಳಿ ಕಾರಣ ಎಂಬ ಮಾತೂ ಸಾಮಾನ್ಯವಾಗಿತ್ತು. ಇದಕ್ಕೆಲ್ಲ ಮುಕ್ತಿಕೊಡಲೆಂದೇ ರೂಪುಗೊಂಡಿರುವ ಮಾರ್​ಖೇಥ್ ಆಪ್ ಮಧ್ಯವರ್ತಿಗಳ ಹಾವಳಿಗೆ ಪೂರ್ಣವಿರಾಮವಿಟ್ಟಿದೆ. ರೈತ ತನ್ನ ಇಳುವರಿಗೆ ತಾನೇ ದರ ನಿಗದಿ ಮಾಡುವ ಸರ್ವಾಧಿಕಾರ ನೀಡಿದೆ.

ರೈತರಿಗೆ ನೂರಾರು ಆಯ್ಕೆ

ಇತ್ತೀಚಿನವರೆಗೂ, ಹೆಚ್ಚಿನ ರೈತರು ಸ್ಥಳೀಯ ದಲ್ಲಾಳಿಗಳನ್ನೇ ಅವಲಂಬಿಸುವುದು ಅನಿ ವಾರ್ಯವಾಗಿತ್ತು. ಆದರೆ ಈಗ ಅಗ್ರಿಟೆಕ್ ಕಂಪನಿಯಾದ ಒನ್​ರೂಟ್, ರೈತರಿಗೆ ನೂರಾರು ಖರೀದಿದಾರರ ನೇರ ಸಂಪರ್ಕ ಕಲ್ಪಿಸಿಕೊಟ್ಟಿದೆ. ಮಾರ್ಕೆಟ್ ಅಪ್ಲಿಕೇಶನ್ ಮೂಲಕ ರೈತರು ವಿವಿಧ ಪ್ರದೇಶಗಳ ಸುಮಾರು 10 ರಿಂದ 15 ಖರೀದಿದಾರರಿಂದ ಕರೆಗಳನ್ನು ಸ್ವೀಕರಿಸುತ್ತಿದ್ದಾರೆ. ಒಂದು ವೇಳೆ ರೈತರು ಇನ್ನಷ್ಟು ಆಯ್ಕೆಯನ್ನು ಇಚ್ಚಿಸಿದರೆ ಪ್ರತಿ ರೈತರ ಹತ್ತಿರ ಸಾವಿರಕ್ಕೂ ಹೆಚ್ಚು ಖರೀದಿದಾರರ ಸಂಪರ್ಕ ಸಿಗಲಿದೆ. ಇದೆಲ್ಲವೂ ರೈತರಿಗೆ ಸಂಪೂರ್ಣ ಉಚಿತ, ಮುಂದೆಯೂ ಉಚಿತ ಎಂದು ಒನ್​ರೂಟ್ ಖಚಿತಪಡಿಸಿದೆ.

ಮಾರ್​ಖೇಥ್ ಅಪ್ಲಿಕೇಷನ್ ನಿರ್ವಹಣೆ

ರೈತರು ಭವಿಷ್ಯದಲ್ಲಿ ತೆಂಗಿನ ಮಂಡಿಗೆ ಸೀಮಿತವಾಗಬೇಕಿಲ್ಲ. ರೈತರು ತಮ್ಮ ಫಸಲು ಮಾರಾಟಕ್ಕೆ ಸಿದ್ದವಾಗಿದೆ ಎಂಬುದನ್ನು ಖಚಿತಪಡಿಸಿದರೆ ಮಾರ್​ಖೇಥ್ ಅಪ್ಲಿಕೇಶನ್ ಮೂಲಕ ಒನ್​ರೂಟ್ ನಿರ್ವಹಣೆ ಆರಂಭಿಸುತ್ತದೆ. 9458 001001 ಗೆ ಕರೆ ಮಾಡುವ ಮೂಲಕ ಅಥವಾ 9458001001 ಗೆ ವಾಟ್ಸಾಪ್ ಸಂದೇಶ ಕಳುಹಿಸುವ ಮೂಲಕ ಕಂಪನಿ ರೈತರ ನೆರವಿಗೆ ತಕ್ಷಣ ಧಾವಿಸುತ್ತದೆ.

ಭರತ್ ಅವರಲ್ಲಿ ಮೂಡಿದ ಕನಸು

ಭರತ್ ದಯಾನಂದರೆಡ್ಡಿ ಮೂಲತಃ ರೈತ ಕುಟುಂಬದವರು, ಅವರ ತಂದೆ ಮಾಜಿ ಎಂಎಲ್​ಸಿ, ಉದ್ಯಮಿ ದಯಾನಂದರೆಡ್ಡಿ ಅವರು ತಮ್ಮ ತೋಟದಲ್ಲಿನ ತೆಂಗಿನ ಇಳುವರಿ ಬಗ್ಗೆ ಸದಾ ಚಿಂತಿಸುತ್ತಿದ್ದರು. ವರ್ಷದಿಂದ ವರ್ಷಕ್ಕೆ ಬೆಲೆ ಪಾತಾಳ ತಲುಪುತ್ತಿರುವುದು ಅವರ ಚಿಂತೆಗೆ ಕಾರಣವಾಗಿತ್ತು. ಏನಾದರೂ ಮಾಡಿ ತೆಂಗು ಬೆಳೆಗಾರನ ಆರ್ಥಿಕ ನಷ್ಟ ತಪ್ಪಿಸುವ ಚಿಂತನೆ ಅವರದಾಗಿತ್ತು. ಆ ಚಿಂತನೆಗೆ ಸ್ಪಂದಿಸಿ ಅವರನ್ನು ಕಾಡುತ್ತಿದ್ದ ಚಿಂತೆಗೆ ಮುಲಾಮು ಹಚ್ಚಲು ಮುಂದಾದವರೇ ಪುತ್ರ ಭರತ್ ದಯಾನಂದ. ಅವರು ತೆಂಗು ಬೆಳೆಗಾರರ ಹಿತಕಾಯಲು ಹೊಸ ದಾರಿಯ ಕುರಿತು ಯೋಚಿಸಿದರು. ಅದರ ಫಲವೇ ಒನ್​ರೂಟ್ ಬ್ರಾ್ಯಂಡ್... ಮಾರ್​ಖೇಥ್ ಆಪ್.

ಒನ್​ರೂಟ್​ನ ಕಾರ್ಯವೈಖರಿ

ಪ್ರತಿದಿನ ಸಕ್ರಿಯ ಕೃಷಿ ಜಮೀನುಗಳನ್ನು ಹುಡುಕುವುದು, ರೈತರಿಂದ ನೇರವಾಗಿ ಖರೀದಿಸುವುದು, ಬೆಂಗಳೂರು, ಹೈದರಾಬಾದ್, ಪುಣೆ, ಮುಂಬೈ, ಚೆನ್ನೈ ಮತ್ತು ದೆಹಲಿಯಂತ ಪ್ರಮುಖ ನಗರಗಳಲ್ಲಿ ಮಾರುಕಟ್ಟೆ ವಿಸ್ತರಿಸುವುದು. ರೈತರ ಇತರ ಉತ್ಪನ್ನಗಳಿಗೆ ಬೆಂಬಲ ಬೆಲೆ ದೊರಕಿಸಿಕೊಡುವುದು. ರೈತರಿಗೆ ವೈಜ್ಞಾನಿಕ ಕೃಷಿ ಸೇವೆ, ಉತ್ಪನ್ನದ ಗುಣಮಟ್ಟ, ಬೆಳೆ ಆರೋಗ್ಯ ಮತ್ತು ಇಳುವರಿ ಸುಧಾರಿಸಲು ಸಹಾಯ ಮಾಡುವುದು. ಅತಿ ಸಣ್ಣ ರೈತರು ಸಹ ಮಾರುಕಟ್ಟೆಯಲ್ಲಿ ಪ್ರೀಮಿಯಂ ದರಗಳನ್ನು ಪಡೆಯಲು ಅನುಕೂಲ ಮಾಡಿಕೊಡುವುದು ಸೇರಿ ಬಹಳಷ್ಟು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಬೆಳೆಯುತ್ತಿರುವ ನೆಟ್​ವರ್ಕ್​ಗೆ ಸೇರಲು ಬಯಸುವ ರೈತರು, ಖರೀದಿದಾರರು ಮತ್ತು ಕೊಯ್ಲು ಮಾಡುವವರು OneRoot Markhet ಅಪ್ಲಿಕೇಶನ್ ಅನ್ನು ಡೌನ್​ಲೋಡ್ ಮಾಡಬಹುದು ಅಥವಾ 9458 001 001 ಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬಹುದು.

ರೈತರಿಂದ ಸಂದೇಶ

ರೈತರು ಈ ಆಪ್ ಮೂಲಕ ‘ಬೆಳೆ ಕೊಯ್ಲಿಗೆ ಸಿದ್ಧ’ ಎಂದು ಸಂದೇಶ ಕಳಿಸಬಹುದು. ನಂತರ, ಹತ್ತಿರದ ಕೊಯ್ಲುಗಾರರು, ಸಂಗ್ರಾಹಕರು, ಸಾಂಸ್ಥಿಕ ಖರೀದಿದಾರರಿಗೆ ತಿಳಿಸಲಾಗುತ್ತದೆ. ಕೆಲವೇ ಗಂಟೆಗಳಲ್ಲಿ ಎಲ್ಲರ ನಡುವೆ ಸಂಪರ್ಕ ಬೆಸೆದು, ಕೊಯ್ಲು ಮಾಡುವವರನ್ನು ತೋಟಕ್ಕೆ ಧಾವಿಸಲು ಮಾರ್ಗದರ್ಶನ ಮಾಡಲಾಗುತ್ತದೆ.

ರೈತನ ಶ್ರಮಕ್ಕೆ ಸಮರ್ಪಕ ಬೆಲೆ ಸಿಗದೆ ಆತನ ಬೆನ್ನೇ ಬಾಗುವಂತಾಗಿದೆ, ಈ ನಿಟ್ಟಿನಲ್ಲಿ ಯೋಚಿಸಿದಾಗ ರೈತಾಪಿ ಜನರ ಬೆನ್ನಿಗೆ ನಿಲ್ಲಬೇಕೆಂಬ ಯೋಜನೆ ಮೊಳಕೆಯೊಡೆದಿತ್ತು. ಇದಕ್ಕೆ ನೀರೆರೆದು ಪೋಷಿಸಿದ ಪುತ್ರ ಭರತ್ ರೆಡ್ಡಿ ಇಂಥಹದೊಂದು ವೇದಿಕೆ ಸೃಷ್ಟಿಸಿದ್ದಾನೆ. ಕೆಲವೇ ವರ್ಷದ ಹಿಂದೆ ಕೇವಲ 15 ರೂಪಾಯಿ ಇದ್ದ ಎಳನೀರು ದರ ಎರಡ್ಮೂರು ವರ್ಷದಿಂದ 50 ರೂ.ದಾಟಿದೆ. ಇದರ ಗುಟ್ಟೇನು ಎಂಬ ಪ್ರಶ್ನೆಗೆ ಈ ಒನ್​ರೂಟ್ ಉತ್ತರ ನೀಡುತ್ತಿದೆ. | ದಯಾನಂದರೆಡ್ಡಿ ಮಾಜಿ ಎಂಎಲ್​ಸಿ

ಜನ್ಮದಿನದ ಸಂಭ್ರಮ ಭರತ್ ದಯಾನಂದಗೆ ರೈತರ ಶುಭಾಶಯ

ಕೃಷಿಕರಿಗೆ ಮುಖ್ಯವಾಗಿ ತೆಂಗು ಬೆಳೆಗಾರರ ನೆರವಿಗೆ ಧಾವಿಸಿರುವ ಇಎನ್​ಪಿ ಫಾರ್ಮ್ಸ್​ ಪ್ರೈ.ಲಿಮಿಟೆಡ್ ಸಂಸ್ಥಾಪಕ ಭರತ್ ದಯಾನಂದ ಇಂದು ಜನ್ಮದಿನದ ಸಂಭ್ರಮದಲ್ಲಿದ್ದು ರಾಜ್ಯದ ಸಮಸ್ತ ರೈತಾಪಿ ಜನರು ಶುಭಕೋರಿದ್ದಾರೆ. ಮಧ್ಯವರ್ತಿಗಳ ಹಾವಳಿಯಿಂದ ಕಂಗಾಲಾಗಿದ್ದ ರೈತರ ಪಾಲಿಗೆ ಸಂಜೀವಿನಿಯಾಗಿರುವ ಒನ್​ರೂಟ್ ಬ್ರಾ್ಯಂಡ್ ಅನ್ನು ಪ್ಯಾನ್​ಇಂಡಿಯಾ ವಿಸ್ತರಿಸುವ ಮೂಲಕ ರಾಜ್ಯ ಹಾಗೂ ದೇಶದ ರೈತರಿಗೆ ನೆರವಾಗಲು ಭರತ್ ದಯಾನಂದ ಯೋಜನೆ ರೂಪಿಸುತ್ತಿದ್ದಾರೆ.

ಮಧ್ಯವರ್ತಿಗಳ ಮಾಯ ಮಾಡಿದ ಮಾರ್​ಖೇಥ್!

ಪ್ರಸ್ತುತ ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರದಾದ್ಯಂತ ಕೇಂದ್ರ ಕಚೇರಿ ಮೂಲಕ ಕಾರ್ಯನಿರ್ವಹಿಸುತ್ತಿರುವ ಒನ್​ರೂಟ್ ಮಧ್ಯವರ್ತಿಗಳ ಏಕಸ್ವಾಮ್ಯವನ್ನು ಮುರಿಯಲು ಪ್ರಮುಖ ಅಸ್ತ್ರವಾಗಿ ಬಳಕೆಯಾಗುತ್ತಿದೆ, ಜತೆಗೆ ಕರ್ನಾಟಕ, ತಮಿಳುನಾಡು, ಹೈದರಾಬಾದ್, ಪುಣೆ, ಮುಂಬೈ, ದೆಹಲಿಯ ವಿವಿಧ ಮಾರುಕಟ್ಟೆಗಳಲ್ಲಿ ಎಳನೀರು ಕೊಯ್ಲು ಮಾಡುವವರು, ಖರೀದಿದಾರರೊಂದಿಗೆ ನೇರಸಂಪರ್ಕ ಸಾಧಿಸಲು ರೈತರಿಗೆ ಸಹಾಯ ಮಾಡುತ್ತಿದೆ.

ಈ ಮೊದಲು ಮಧ್ಯವರ್ತಿಗಳು ಬಂದು ನಮ್ಮ ಉತ್ಪನ್ನಗಳಿಗೆ ಬೆಲೆ ನಿಗದಿಪಡಿಸುವವರೆಗೆ ನಾನು ಕಾಯುತ್ತಿದ್ದೆ. ಈಗ, ನಾನು ಮಾರ್ಕೆಟ್ ಅಪ್ಲಿಕೇಶನ್​ನಲ್ಲಿ ‘ಸಿದ್ಧ’ ಎಂದು ಹೇಳುತ್ತೇನೆ. ಇದಾದ ಒಂದು ದಿನದೊಳಗೆ, ಉತ್ತಮ ಬೆಲೆಗೆ ಕೊಯ್ಲು ಮಾಡಲು ಸಿದ್ಧರಾಗಿರುವ ಖರೀದಿದಾರರು ಅಥವಾ ಸಂಗ್ರಾಹಕರಿಂದ ನನಗೆ ಕರೆಗಳು ಬರುತ್ತವೆ. ಈಗ ನಾನು ನಿರಾಳವಾಗಿದ್ದೇನೆ. ಫಸಲು ಮಾರ್ಕೆಟಿಂಗ್ ಬಗ್ಗೆ ನನಗೆ ಯಾವ ತಲೆನೋವು ಇಲ್ಲವಾಗಿದೆ. | ಬಸವರಾಜ್ ಎಳನೀರು ಬೆಳೆಗಾರ ಮಂಡ್ಯ