ಜಿಲ್ಲೆ

ಚಕ್ರಬಾವಿ ಬಳಿ ಪ್ರತ್ಯಕ್ಷವಾಗಿದ್ದ 4 ಚಿರತೆಗಳಲ್ಲಿ ಒಂದು ಸೆರೆ

ಮಾಗಡಿ: ತಾಲೂಕಿನ ಚಕ್ರಬಾವಿ ಗ್ರಾಮದ ಬಳಿ ಪ್ರತ್ಯಕ್ಷವಾಗಿದ್ದ 4 ಚಿರತೆಯಲ್ಲಿ 1 ಗಂಡು ಚಿರತೆಯನ್ನು ಗುರುವಾರ ಅರಣ್ಯಾಧಿಕಾರಿಗಳು ಸೆರೆಹಿಡಿದ್ದಾರೆ.

ಗ್ರಾಮದವರು ಮಂಗಳವಾರ ತಡರಾತ್ರಿ ಕಾರಿನಲ್ಲಿ ತೆರಳುವಾಗ ಗ್ರಾಮ ಹೊರವಲಯದಲ್ಲಿ 4 ಚಿರತೆಗಳು ಪ್ರತ್ಯಕ್ಷವಾಗಿದ್ದವು. ಈ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆಹಿಡಿದಿದ್ದ ಯುವಕರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ವಿಡಿಯೋ ವೈರಲ್​ ಆಗುತ್ತಿದ್ದಂತೆ ಮುನ್ನೆಚ್ಚರಿಕೆಯಿಂದ ವಲಯ ಅರಣ್ಯಾಧಿಕಾರಿ ಚೈತ್ರಾ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ನರಸಿಂಹ ಮೂರ್ತಿ ಎಂಬುವವರ ತೋಟದಲ್ಲಿ ಬೋನು ಆಳವಡಿಸಿದ್ದರು.

ಚಿರತೆಗಳ ಚಲನ ವಲನ ಗಮನಿಸಿ ಎರಡು ಬೋನುಗಳನ್ನು ಅಳವಡಿಸಲಾಗಿದ್ದು, ಒಂದು ಚಿರತೆ ಸೆರೆಯಾಗಿದೆ. ಇನ್ನೊಂದು ಚಿರತೆ ಸುತ್ತಮುತ್ತಲ ಪ್ರದೇಶದಲ್ಲಿ ಸಂಚರಿಸಿರುವ ಮಾಹಿತಿ ಇದ್ದು, ಅದನ್ನೂ ಸೆರೆಹಿಡಿಯಲಾಗುವುದು. > ಚೈತ್ರಾ ವಲಯ ಅರಣ್ಯಾಧಿಕಾರಿ