ಜಿಲ್ಲೆ

ನೂರು ಆಚಾರ್ಯರಿಗೆ ಒಬ್ಬ ತಾಯಿ ಸಮ

ಲಕ್ಷ್ಮೇಶ್ವರ: ಮಹಿಳೆ ಶಾಂತಿ ಮತ್ತು ತಾಳ್ಮೆಯ ಪ್ರತಿರೂಪವಾಗಿದ್ದಾಳೆ. ಮಹಿಳೆಯರಿಗೆ ನೀಡುವ ಸ್ಥಾನ ಮಾನವು ಒಂದು ದೇಶದ ಪ್ರಗತಿಯ ಸಂಕೇತವಾಗಿದೆ ಎಂದು ಆದರಳ್ಳಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಶ್ರೀಕಾಂತ ನಂದೆಣ್ಣವರ ಹೇಳಿದರು.

ತಾಲೂಕಿನ ಆದರಹಳ್ಳಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಮಹಿಳೆಯರು ಇಂದು ಎಲ್ಲ ರಂಗಗಳಲ್ಲಿಯೂ ಸಾಧನೆ ಮಾಡುವ ಮೂಲಕ ಸಮಾನತೆಯ ಸಂಕೇತವಾಗಿದ್ದಾರೆ. ಮಹಿಳೆಯರನ್ನು ಗೌರವಿಸುವ ಕಾರ್ಯವಾಗಬೇಕು ಎಂದರು.

ಶಾಲೆಯ ಶಿಕ್ಷಕಿಯರು ಹಾಗೂ ಅಡುಗೆ ಸಹಾಯಕಿಯರನ್ನು ಗೌರವಿಸಲಾಯಿತು. ಸಹ ಶಿಕ್ಷಕಿ ಮಂಜುಳಾ ಮೆಣಸಿನಕಾಯಿ ಮಾತನಾಡಿ, ಹೆಣ್ಣು ಅಬಲೆಯಲ್ಲ ಸಬಲೆ. ನೂರು ಆಚಾರ್ಯರಿಗೆ ಒಬ್ಬ ತಾಯಿ ಸಮನಾಗಿದ್ದಾಳೆ ಎಂದರು. ವಸಂತಕುಮಾರ ಸ್ವಾಗತಿಸಿದರು ಶಂಕರ ಉಪ್ಪಿನ ವಂದಿಸಿದರು, ಚಂದ್ರು ಅಂಟಿ ನಿರೂಪಿಸಿದರು.