ಹುಬ್ಬಳ್ಳಿ: ತಾಲೂಕಿನ ನೂಲ್ವಿ ಗ್ರಾಮ ಬಳಿಯ ಪರಣ್ಣವರ ಕೋಳಿ ಫಾರ್ಮ್ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಕುಂದಗೋಳ ತಾಲೂಕು ಶಿರೂರು ಗ್ರಾಮದ ಮಂಜುನಾಥ ಬಸಪ್ಪ ಗಾಣಿಗೇರ (31) ಮೃತಪಟ್ಟವರು. ಕುಂದಗೋಳ ಕ್ರಾಸ್‌ನಿಂದ ನೂಲ್ವಿ ಕಡೆಗೆ ಬೈಕ್‌ನಲ್ಲಿ ವೇಗವಾಗಿ ಬರುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಬೈಕ್ ಸ್ಕಿಡ್ ಆಗಿದ್ದರಿಂದ ತಲೆಗೆ ಪೆಟ್ಟು ಬಿದ್ದಿತ್ತು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.