ಕಮಲಾಪುರ: ಮರಗುತ್ತಿ ಗ್ರಾಮದ ಸರ್ವೇ ನಂ.25/3ರಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾವನ್ನು ಪೊಲೀಸರು ಬುಧವಾರ ವಶಪಡಿಸಿಕೊಂಡು ವಿಶ್ವನಾಥ ನಾಟೀಕಾರ ಎಂಬುವರನ್ನು ಬಂಧಿಸಿದ್ದಾರೆ. ತಾಪಂ ಇಒ ಅಂಬರೀಶ ಪಾಟೀಲ್, ಪಿಎಸ್‌ಐ ಸಂಗೀತಾ ಶಿಂಧೆ ನೇತೃತ್ವದ ತಂಡ ದಾಳಿ ನಡೆಸಿ 1.07 ಲಕ್ಷದ 2.158 ಕೆಜಿ ಗಾಂಜಾ ವಶಪಡಿಸಿಕೊಂಡಿದೆ. ರಾಮಚಂದ್ರ, ರಾಜಶೇಖರ, ಬಸವರಾಜ, ಸಂತೋಷ, ಮಹಿಬೂಬ್‌ಮಿಯಾ, ಲಕ್ಷಿö್ಮÃ ಇತರರು ತಂಡದಲ್ಲಿದ್ದರು.