ಜಿಲ್ಲೆ

ವಿದ್ಯುತ್ ತಂತಿ ಸ್ಪರ್ಶಿಸಿ ಒಬ್ಬ ಸಾವು, ಇಬ್ಬರಿಗೆ ಗಾಯ

ರವಿಕುಮಾರ್ ಪಿ. ಕೆ

ಅರಕಲಗೂಡು: ತಾಲೂಕಿನ ಕತ್ತಿನಲ್ಲೇನಹಳ್ಳಿ ಗ್ರಾಮದಲ್ಲಿ ಸೋಮವಾರ ಗಣಪತಿ ವಿಸರ್ಜನೆ ಮಾಡಿ ವಾಪಸ್ಸಾಗುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಒಬ್ಬ ಮೃತಪಟ್ಟು ಇಬ್ಬರು ಗಾಯಗೊಂಡಿದ್ದಾರೆ.

ಗ್ರಾಮದ ಯಶ್ವಂತ್ (14) ಮೃತ ಬಾಲಕ. ಪ್ರಮೋದ್, ಮೋಹನ್ ಎಂಬುವರು ಗಾಯಗೊಂಡಿದ್ದು ಸರ್ಕಾರಿ ಆಸ್ಪತ್ರಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಗ್ರಾಮದಲ್ಲಿ ಕೆರೆಗೆ ಗಣೇಶ ವಿಸರ್ಜನೆ ಮಾಡಿ ಹಿಂದಿರುಗುವಾಗ ಟ್ರ್ಯಾಕ್ಟರ್‌ಗೆ ಅಳವಡಿಸಿದ್ದ ಅಲಂಕೃತ ಬೋರ್ಡ್ ವಿದ್ಯುತ್ ತಂತಿಗೆ ತಗುಲಿದೆ. ಇದರಿಂದ ವಿದ್ಯುತ್ ಪ್ರವಹಿಸಿ ಟ್ರಾೃಕ್ಟರ್‌ನಲ್ಲಿ ಕುಳಿತಿದ್ದ ಯಶ್ವಂತ್ ಮೃತಪಟ್ಟು ಇಬ್ಬರಿಗೆ ಗಾಯಗಳಾಗಿವೆ. ಉಳಿದವರು ಟ್ರ್ಯಾಕ್ಟರ್‌ನಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅರಕಲಗೂಡು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.