ಜಿಲ್ಲೆ

ಕಾರು ಅಪಘಾತದಲ್ಲಿ ಒಬ್ಬನಿಗೆ ಗಾಯ

ವೀರೇಶ ಸೌದ್ರಿ

ಭಟ್ಕಳ: ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತಕ್ಕೀಡಾದ ಘಟನೆ ತಾಲೂಕಿನ ಬೈಲೂರು ಬಳಿ ಗುರುವಾರ ನಡೆದಿದೆ. ಕಾರಿನಲ್ಲಿದ್ದ ಆರು ಯುವಕರ ಪೈಕಿ ಒಬ್ಬರ ಬೆನ್ನಿಗೆ ಗಂಭೀರ ಗಾಯವಾಗಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಾರು ಮಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿತ್ತು.

ಅಪಘಾತ ಸಂಭವಿಸಿದಾಗ ಅದೇ ಮಾರ್ಗದಲ್ಲಿ ಹೊರಟಿದ್ದ ಪ್ರಭಾರಿ ಎಸಿ ಕಾವ್ಯರಾಣಿ ಅವರು ತಕ್ಷಣ ಕಾರು ನಿಲ್ಲಿಸಿ ಭಟ್ಕಳ ಟಿಎಚ್‌ಒಗೆ ಕರೆ ಮಾಡಿ ಸ್ಥಳಕ್ಕೆ ಆಂಬುಲೆನ್ಸ್ ತರಿಸಿದ್ದಾರೆ. ಸ್ಥಳೀಯರ ಸಹಾಯದಿಂದ ಪಕ್ಕದಲ್ಲಿ ಇದ್ದ ಮಂಕಿ ಸರ್ಕಾರಿ ಆಸ್ಪತ್ರೆಗೆ ಯುವಕರನ್ನು ಸೇರಿಸಿ ಆರೋಗ್ಯ ವಿಚಾರಿಸಿದ್ದಾರೆ. ಸ್ಥಳದಲ್ಲಿದ್ದು ಗಾಯಾಳುವನ್ನು ಆಸ್ಪತ್ರೆಗೆ ಸೇರಿಸುವ ತನಕ ಸಹಕರಿಸಿದ ಎಸಿ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.