BHIMESH 
ಜಿಲ್ಲೆ

ಎರಡು ಗುಂಪುಗಳ ನಡುವೆ ಜಗಳ ಒಬ್ಬ ಸಾವು,ಹಲವರ ಸ್ಥಿತಿ ಗಭೀರ

Raichur - Reporter - Rachhai Swamy

ಮಾನ್ವಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಜಗಳ ನಡೆದು ವ್ಯಕ್ತಿ ಯೋರ್ವ ಮೃತ ಪಟ್ಟಿದ್ದು, ೯ ಜನರಿಗೆ ಗಂಭೀರ ಗಾಯಗಳಾದ ಘಟನೆ ತಾಲೂಕಿನ ಮಲ್ಲಿನಮಡಗು ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಭೀಮೇಶ್( ೪೫ ) ಮೃತಪಟ್ಟ ವ್ಯಕ್ತಿ.

ಗ್ರಾಮದಲ್ಲಿ ಕಾಮಗಾರಿಯ ನಾಮ-Àಲಕ ಹಾಕುವ ವಿಚಾರದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಹಾಗೂ ಗ್ರಾಮದ ಇತರ ಗುಂಪುಗಳ ನಡುವೆ ಜಗಳವಾಗಿದ್ದು, ಜಗಳವನ್ನು ಬಿಡಿಸಲು ಹೋದ ಭೀಮೇಶ್‌ನ ತಲೆಗೆ ಬಲವಾದ ಪೆಟ್ಟು ಬಿದ್ದಿರುವುದರಿಂದ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಘರ್ಷಣೆಯಲ್ಲಿ ೯ ಜನರಿಗೆ ತೀವ್ರವಾದ ಗಾಯಗಳಾಗಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತ ಭೀಮೇಶನ ಪತ್ನಿ ಶಾಂತಮ್ಮ ನೀಡಿದ ದೂರಿನ ಮೇರೆಗೆ ಒಟ್ಟು ೨೨ ಜನರ ವಿರುದ್ಧ ಮಾನ್ವಿ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಎಎಸ್ಪಿ ಹರೀಶ್,ಪಿಐ ವೀರಭದ್ರಯ್ಯ ಹಿರೇಮಠ ಭೇಟಿ ನೀಟಿ ಆರೋಪಿಗಳ ಬಂಧನಕ್ಕೆ ಬಲೆ ಬಿಸಿದ್ದಾರೆ.