ಜಿಲ್ಲೆ

ಸರಣಿ ಅಪಘಾತ ಓರ್ವ ಸಾವು

ತುಮಕೂರು ಡೆಸ್ಕ್

ಗುಬ್ಬಿ: ತಾಲೂಕಿನ ನಿಟ್ಟೂರು ಹೋಬಳಿ ಎಚ್​ಎಎಲ್​ ಬಳಿ ಸಂಭವಿಸಿದ ಸರಣಿ ಅಪಘಾತದಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಯುವಕ ಸಾವನ್ನಪ್ಪಿದ್ದು, ಮತ್ತೋರ್ವ ಗಾಯಗೊಂಡಿರುವ ಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.

ಸಾಗರನಹಳ್ಳಿ ಗೇಟ್​ ಬಳಿ ಎನ್​ಎಚ್​ 206ರಲ್ಲಿ ತಿಪಟೂರು ಕಡೆಯಿಂದ ತುಮಕೂರಿನತ್ತ ಕ್ಯಾಟಂರ್​ಗೆ ದ್ವಿಚಕ್ರವಾಹನ ಡಿಕ್ಕಿ ಹೊಡೆದ ಪರಿಣಾಮ ವರುಣ್​ ಪಾಟೀಲ್​(23) ಸ್ಥಳದಲ್ಲೇ ಸಾವನ್ನಪ್ಪಿದರೆ ಮತ್ತೋರ್ವ ದಿನೇಶ್​ (38) ಗಾಯಗೊಂಡಿದ್ದಾರೆ. ಈ ವೇಳೆ ಹಿಂದೆ ಬರುತ್ತಿದ್ದ ಹೋಂಡಾ ಅಮೇಜ್​, ಇನ್ನೋವಾ ಕಾರುಗಳು ಒಂದಕ್ಕೊಂಡು ಡಿಕ್ಕಿ ಹೊಡೆದುಕೊಂಡಿವೆ. ಅದೃಷ್ಟವಶಾತ್​ ಯಾರೊಬ್ಬರು ಗಾಯಗೊಂಡಿಲ್ಲ. ವರುಣ್​, ದಿನೇಶ್​ ಡಾಬಸಪೇಟೆಯ ಖಾಸಗಿ ಕಂಪನಿಯಲ್ಲಿ ಉದ್ಯೋಗಿಗಳಾಗಿದ್ದು ದೊಡ್ಡಗುಣಿಯವರು ಎನ್ನಲಾಗಿದೆ.

ಗುಬ್ಬಿ ಪೊಲೀಸ್​ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.