ಜಿಲ್ಲೆ

ಸಿಲಿಂಡರ್ ಸೋರಿಕೆ ಪ್ರಕರಣದಲ್ಲೊಬ್ಬರ ಸಾವು

ಮರಿದೇವ ಹೂಗಾರ

ಹುಬ್ಬಳ್ಳಿ: ನಗರ ಹೊರವಲಯದ ಗಾಮನಗಟ್ಟಿ ಕೈಗಾರಿಕಾ ವಸಾಹತು ಪ್ರದೇಶದ ತೋಟದ ಕೊಠಡಿಯೊಂದರಲ್ಲಿ ಅಡುಗೆ ಅನಿಲ ಸೋರಿಕೆಯಿಂದಾಗಿ ಬೆಂಕಿ ಹೊತ್ತಿ ಗಂಭೀರವಾಗಿ ಗಾಯಗೊಂಡಿದ್ದ ಮೂವರಲ್ಲೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮೃತಪಟ್ಟಿದ್ದಾರೆ.

ರಾಜಸ್ಥಾನದ ಜೋಧಪುರ ಜಿಲ್ಲೆ ಅನಾರಸದ ಸುಭಾಷ ಮೋಹನರಾಮ ಬಿಷ್ಟೋಯಿ (26) ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಅನಾರಸದ ಮಂಗಿಲಾಲ ರಾಣಾರಾಮ (28), ಜೋಧಪುರದ ಅಶೋಕ ಅಂಧಾರಾಮ (25) ಅವರನ್ನು ಕುಟುಂಬಸ್ಥರು ಹೆಚ್ಚಿನ ಚಿಕಿತ್ಸೆಗಾಗಿ ರಾಜಸ್ಥಾನಕ್ಕೆ ಕರೆದೊಯ್ದಿದ್ದಾರೆ. ಗೋಕುಲ ರಸ್ತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.