ಜಿಲ್ಲೆ

ಬೈಕ್​ಗಳ ನಡುವೆ ಡಿಕ್ಕಿ; ಓರ್ವ ಸಾವು

Haveri - Kariyappa Aralikatti

ರಾಣೆಬೆನ್ನೂರ: ಎರಡು ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಓರ್ವ ಮೃತಪಟ್ಟ ಟನೆ ತಾಲೂಕಿನ ತಾಲೂಕಿನ ಗುಡ್ಡದಆನ್ವೇರಿ ಗ್ರಾಮದ ಬಳಿ ಬಿಳಿಗಿರಿರಂಗನಬೆಟ್ಟ&ಬಾಗಲಕೋಟೆ ರಾಜ್ಯ ಹೆದ್ದಾರಿಯಲ್ಲಿ ಸೋಮವಾರ ನಡೆದಿದೆ.

ಗ್ರಾಮದ ರಾಹುಲ ಗುಡ್ಡಪ್ಪ ಆನ್ವೇರಿ (25) ಮೃತ ಬೈಕ್​ ಸವಾರ.

ಈತ ಗುಡ್ಡದ ಆನ್ವೇರಿ ಗ್ರಾಮದಿಂದ ಹೋಗುತ್ತಿದ್ದ ಸಮಯದಲ್ಲಿ ಎದುರಿಗೆ ಬರುತ್ತಿದ್ದ ಮತ್ತೊಂದು ಬೈಕ್​ ನಡುವೆ ಡಿಕ್ಕಿ ಸಂಭವಿಸಿದೆ. ಇದರಿಂದ ರಾಹುಲ ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.