ಜಿಲ್ಲೆ

ಕಾರು ಅಪಘಾತದಲ್ಲಿ ಒಬ್ಬ ಸಾವು, ನಾಲ್ವರಿಗೆ ಗಾಯ

Gadag - Desk - Tippanna Avadoot

ಲಕ್ಷ್ಮೇಶ್ವರ: ನೂಲ್ವಿ ಬೈಪಾಸ್​ನಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಒಬ್ಬರು ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ತಾಲೂಕಿನ ಶಿಗ್ಲಿ ಗ್ರಾಮದ, ಲಕ್ಷ್ಮೇಶ್ವರ ಇಂದಿರಾ ನಗರದ ಸರ್ಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆಯ ಶಿಕ್ಷಕ ಬಾಲಚಂದ್ರ ಬಿ ಹುಲಗೂರ (60) ಮೃತಪಟ್ಟವರು.

ಶಿಗ್ಲಿಯಿಂದ ಹುಬ್ಬಳ್ಳಿಗೆ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ.