ಜಿಲ್ಲೆ

ಯುವಜನರ ಸದ್ಬಳಕೆ ಅಗತ್ಯ

ಇಂದಿರಾ ಎನ್ ಕೆ

ಹೆಬ್ರಿ: ಭಾರತ ಯುವಜನತೆ ತುಂಬಿದ ರಾಷ್ಟ್ರ. ಅದರ ಸದ್ಬಳಕೆ ಬದಲು ದುರ್ಬಳಕೆ ಆಗುತ್ತಿರುವುದು ಬೇಸರದ ಸಂಗತಿ. ಪ್ರತಿಯೊಂದು ಶಕ್ತಿಗಳ ಸದ್ಬಳಕೆ ಆದಾಗ ಜೀವನ ಸಾರ್ಥಕ ಎಂದು ಅದಮಾರು ಮಠದ ಸ್ವಾಮೀಜಿ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಹೇಳಿದರು.

ಶಾಂತಿನಿಕೇತನ ಯುವವೃಂದ ವತಿಯಿಂದ ಕುಡಿಬೈಲು ಗದ್ದೆಯಲ್ಲಿ ಬುಧವಾರ ಶಾಂತಿನಿಕೇತನ ಕೆಸರು ಗದ್ದೆಗೆ ಒಂದು ದಿನ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ತುಮಕೂರು ವಿವಿ ಕಲಾ ಕಾಲೇಜಿನ ವ್ಯವಹಾರ ಆಡಳಿತ ವಿಭಾಗ ಹಾಗೂ ಎನ್‌ಸಿಸಿ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಾಜಿ ಶಾಸಕ ಪ್ರಮೋದ್ ಮಧ್ವರಾಜ್, ಉದಯ ಕೃಷ್ಣ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಉದಯ ಶೆಟ್ಟಿ ಮುನಿಯಾಲು, ಉದ್ಯಮಿ ಕಿರಣ್ ತೋಳಾರ್, ಶಾಂತಿನಿಕೇತನ ಅಧ್ಯಕ್ಷ ದೀಕ್ಷಿತ್ ನಾಯಕ್, ಸಂಸ್ಥಾಪಕ ರಾಜೇಶ್, ಉಪನ್ಯಾಸಕರಾದ ಅರುಣ್ ಕುಮಾರ್ ಕೆ., ವಾಸುದೇವ್ ಡಿ.ಎಂ., ಮಂಜುಳಾದೇವಿ, ಆಡಳಿತ ಮಂಡಳಿ ಸದಸ್ಯರಾದ ನರೇಂದ್ರ, ಗಣೇಶ ಶೆಟ್ಟಿ, ಜಯಕರ, ನಾಗರಾಜ್, ರಾಜಶ್ರೀ, ಪ್ರಸನ್ನ ಇದ್ದರು. ಸಂಸ್ಥಾಪಕ ರಾಜೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನರೇಂದ್ರ ಕಾರ್ಯಕ್ರಮ ನಿರೂಪಿಸಿದರು.

ಇಂದಿನ ಕಾಲದಲ್ಲಿ ಹಿರಿಯರಿಂದ ಮೊಮ್ಮಕ್ಕಳ ತನಕ ಖುಷಿ ಇತ್ತು. ಆದರೆ ಇಂದು ಯುವಕರ ಕೃಷಿಯಿಂದ ವಿಮುಖರಾಗಿದ್ದಾರೆ. ಅಜ್ಜಂದಿರಿಗೆ ಕೃಷಿ ಮಾಡಲು ಸಾಧ್ಯವಿಲ್ಲ. ಕೃಷಿ ಕುಂಠಿತವಾಗದೆ, ಯುವಜನತೆ ಹೆಚ್ಚು ಪಾಲ್ಗೊಳ್ಳುವಂತಾಗಬೇಕು. -ಪ್ರಮೋದ್ ಮಧ್ವರಾಜ್ ಮಾಜಿ ಶಾಸಕ https://www.vijayavani.net/ganesh-shet-elected-as-president https://www.vijayavani.net/anamaya-tanishka-selected-for-state-level