ಮುಂಡರಗಿ: ಆಮ್ ಆದ್ಮಿ ಪಾರ್ಟಿ(ಎಎಪಿ) ಎಲ್ಲರ ಮೆಚ್ಚಿನ ಪಕ್ಷವಾಗಿ ಹೊರಹೊಮ್ಮುತ್ತಲಿದೆ. ಮುಂದೊಂದು ದಿನ ದೇಶದ ಚುಕ್ಕಾಣಿ ಹಿಡಿಯಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಎ.ವೈ. ನವಲಗುಂದ ವಿಶ್ವಾಸ ವ್ಯಕ್ತಪಡಿಸಿದರು. ಪಟ್ಟಣದ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿ (ಬೃಂದಾವನ ಸರ್ಕಲ್) ಎಎಪಿ ಕಾರ್ಯಕರ್ತರು ಮಂಗಳವಾರ ಹಮ್ಮಿಕೊಂಡಿದ್ದ ಎಎಪಿ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಎಎಪಿ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ಗುಗ್ಗರಿ ಮಾತನಾಡಿದರು. ಎಎಪಿ ಶಿರಹಟ್ಟಿ ಮತಕ್ಷೇತ್ರದ ಅಧ್ಯಕ್ಷ ಸುಭಾಸ ಕುಂಬಾರ, ತಾಲೂಕಾಧ್ಯಕ್ಷ ಚಂದ್ರಹಾಸ ದೊಡ್ಡಮನಿ, ಮುಖಂಡರಾದ ಖಾಜಾಸಾಬ್ ಮುಲ್ಲಾ, ಸುರೇಶ ಕಂಚಗಾರ, ಪರಶುರಾಮ ಇತರರಿದ್ದರು.