ಮಂಗಳೂರು: ಪುತ್ತೂರು ಸಂಪ್ಯ ಗ್ರಾಮಾಂತರ ಠಾಣೆ ಪೊಲೀಸ್ ಸಿಬ್ಬಂದಿ ಎಣ್ಮಕಜೆ ಗ್ರಾಮದ ಸಾರಡ್ಕ ನಿವಾಸಿ ಗಣೇಶ್ ನಾಯ್ಕ (44) ಬುಧವಾರ ಸ್ವರ್ಗ ಚೆಕ್‌ಪೋಸ್ಟ್‌ಗೆ ಕರ್ತವ್ಯಕ್ಕೆ ತೆರಳುತಿದ್ದಾಗ ಹಠಾತ್ ಸಾವನ್ನಪ್ಪಿದ್ದಾರೆ. ಮೃತರು ತಾಯಿ, ಪತ್ನಿ ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ. ಹೃದಯ ಸಂಬಂಧಿ ಸಮಸ್ಯೆಯಿಂದ ಮೃತಟ್ಟಿದ್ದು, ಹೃದಯಾಘಾತ ಅಲ್ಲ ಎಂದು ತಿಳಿದುಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಮೃತ ಪೊಲೀಸ್ ಗಣೇಶ್ ನಾಯ್ಕ್ ಅವರು ಸುರತ್ಕಲ್ , ಬೆಳ್ತಂಗಡಿ, ಹಾಗೂ ವಿಟ್ಲ ದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಸುಮಾರು ಎರಡು ವರ್ಷದ ಹಿಂದೆ ವಿಟ್ಲದಿಂದ ಪುತ್ತೂರು ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು.