ಜಿಲ್ಲೆ

ವಿದ್ಯಾನಗರದಲ್ಲಿ ಓಣಂ ಮೇಳಕ್ಕೆ ಚಾಲನೆ

ಸೌಮ್ಯ ಆರ್

ಕಾಸರಗೋಡು: ಖಾದಿ ಮಂಡಳಿ ಮತ್ತು ವಿವಿಧ ಖಾದಿ ಸಂಸ್ಥೆಗಳ ವತಿಯಿಂದ ವಿದ್ಯಾನಗರ ಸಿವಿಲ್ ಸ್ಟೇಷನ್‌ನಲ್ಲಿ ಆಯೋಜನೆಗೊಂಡಿರುವ ಐದು ದಿನಗಳ ಓಣಂ ಮೇಳವನ್ನು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಉದ್ಘಾಟಿಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳಾದ ಕೆ.ವಿ ರಾಘವನ್, ಎಂ.ಮಧುಸೂಧನನ್, ಪಿ.ಸುಭಾಷ್, ಶೋಭಾ, ಎ.ಜಯಚಂದ್ರನ್ ಉಪಸ್ಥಿತರಿದ್ದರು. ಆ.23ರಂದು ಮೇಳ ಸಮಾಪ್ತಿಗೊಳ್ಳಲಿದೆ. ಉದುಮದಲ್ಲಿ ಮೇಳ: ಉದುಮ ಪಂಚಾಯಿತಿ ವಾರ್ಡಿನಲ್ಲಿ ಆಯೋಜಿರುವ ಮೇಳವನ್ನು ಗ್ರಾಪಂ ಸದಸ್ಯ ಎನ್.ರಾಮಚಂದ್ರನ್ ಉದ್ಘಾಟಿಸಿದರು. ಪಿ.ವಿ.ಭಾಸ್ಕರನ್ ಅಧ್ಯಕ್ಷತೆ ವಹಿಸಿದ್ದರು. ಯೋಜನಾಧಿಕಾರಿ ಪಿ.ಸುಭಾಷ್, ಗ್ರಾಮೋದ್ಯೋಗ ಅಧಿಕಾರಿ ಟಿ.ವಿ.ವಿನೋದ್ ಕುಮಾರ್, ಉದುಮ ಸೇವಾ ಸಹಕಾರಿ ಬ್ಯಾಂಕ್ ಕಾರ್ಯದರ್ಶಿ ಅಖಿಲ್ ಇದ್ದರು.