ಕುಂಬಳೆ: ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆಯಲ್ಲಿ ಎಸ್‌ಪಿಸಿ ವಿದ್ಯಾರ್ಥಿಗಳ ಓಣಂ ತ್ರಿದಿನ ಶಿಬಿರದ ಔಪಚಾರಿಕ ಉದ್ಘಾಟನೆ ಇತ್ತೀಚೆಗೆ ಜರುಗಿತು.
ಬದಿಯಡ್ಕ ಆರಕ್ಷಕ ಠಾಣಾ ಎಸ್.ಐ. ಅಖಿಲ್ ಟಿ. ಉದ್ಘಾಟಿಸಿದರು. ಪುತ್ತಿಗೆ ಗ್ರಾಪಂ ಅಧ್ಯಕ್ಷ ಸುಬ್ಬಣ್ಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಹೈಯರ್ ಸೆಕೆಂಡರಿ ಶಾಲೆ ಪ್ರಾಂಶುಪಾಲ ಎನ್.ರಾಮಚಂದ್ರ ಭಟ್, ಪ್ರೌಢಶಾಲೆಯ ವ್ಯವಸ್ಥಾಪಕ ಎನ್.ಶಂಕರನಾರಾಯಣ ಭಟ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಶಶಿಕುಮಾರ್ ಪಿ., ರಕ್ಷಕ ಶಿಕ್ಷಕ ಸಮಿತಿ ಅಧ್ಯಕ್ಷ ಅಶೋಕ್ ಭಂಡಾರಿ, ಮಾತೃ ಮಂಡಳಿ ಅಧ್ಯಕ್ಷೆ ದಿವ್ಯಾಭಾರತಿ, ಬದಿಯಡ್ಕ ಠಾಣಾ ಆರಕ್ಷಕ ರಜೀಶ್, ಪ್ರಸೀತಾ, ಶಿಕ್ಷಕ ಅಭಿಲಾಷ್ ಪೆರ್ಲ ಮತ್ತು ಪ್ರಶಾಂತ ಹೊಳ್ಳ, ಸತೀಶ್ ಶೆಟ್ಟಿ ಒಡ್ಡಂಬೆಟ್ಟು, ಸದಾಶಿವ ಬಾಲಮಿತ್ರ ಮತ್ತು ಗೋಪಾಲ ಕಾಟುಕುಕ್ಕೆ ಮಾಹಿತಿ ನೀಡಿದರು. ಯೋಗ ತರಗತಿ, ಸೈಬರ್ ಸುರಕ್ಷೆ ತಂತ್ರಜ್ಞಾನ ಸಾಕ್ಷರತೆ, ನೈತಿಕ ಉಪ ಆಯಾಮ ಸಾಮಾಜಿಕ ಮೌಲ್ಯಗಳು, ರಸ್ತೆ ನಡಿಗೆ, ಆಟೋಟಗಳ ತರಬೇತಿ ನಡೆಯಿತು. ಯೋಗ ತರಬೇತಿ ಹಾಗೂ ಪ್ರಾಣಾಯಾಮಗಳ ಬಗ್ಗೆ ಅಡೂರು ಸರ್ಕಾರಿ ಪ್ರೌಢಶಾಲೆಯ ಅಧ್ಯಾಪಕ ಶಶಿಧರ ಕೆ. ಪ್ರಾತ್ಯಕ್ಷಿಕೆ ಹಾಗೂ ತರಬೇತಿಯನ್ನು ನೀಡಿದರು.
ಬಳಿಕ ದೈಗೋಳಿ ಶ್ರೀಸಾಯಿನಿಕೇತನ ಆಶ್ರಮ ಭೇಟಿ, ಓಣಂ ಆಚರಣೆ ನಡೆಯಿತು. ಆಶ್ರಮದ ರೂವಾರಿ ಉದಯಕುಮಾರ್ ನೂಜಿ ಅವರನ್ನು ಸನ್ಮಾನಿಸಲಾಯಿತು. ವಾಣಿವಿಜಯ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಕೃಷ್ಣವೇಣಿ, ಶಾಲೆ ಪ್ರಬಂಧಕ ಎನ್.ಶಂಕರನಾರಾಯಣ ಭಟ್, ಶಿಕ್ಷಕ ರಾಮಮೋಹನ ಚಕ್ಕೆ ಶುಭಹಾರೈಸಿದರು. ಮುಖ್ಯ ಶಿಕ್ಷಕ ಎನ್.ಮಹಾಲಿಂಗ ಭಟ್, ಎ.ಸಿ.ಪಿ.ಒ. ಶಿವಪ್ರಸಾದ್ ಸಿ., ಸಿ.ಪಿ.ಒ. ಈಶ್ವರಿ ಡಿ., ಪ್ರಶಾಂತ ಹೊಳ್ಳ ಎನ್., ಅಭಿಲಾಷ್ ಪೆರ್ಲ, ಕೇಶವ ಪ್ರಸಾದ್ ಎಡಕ್ಕಾನ ಮೊದಲಾದವರಿದ್ದರು.