ಜಿಲ್ಲೆ

ಓಣಂ ಅವಧಿಯಲ್ಲಿ ಬೆಲೆಯೇರಿಕೆ ತಡೆಗೆ ಕ್ರಮ : ಜಿಲ್ಲಾಮಟ್ಟದ ಓಣಂ ಮೇಳ ಉದ್ಘಾಟಿಸಿ ಸಚಿವ ಎ.ಕೆ.ಶಶೀಂದ್ರನ್ ಹೇಳಿಕೆ

ಸೌಮ್ಯ ಆರ್

ಕಾಸರಗೊಡು: ಓಣಂ ಹಬ್ಬದ ಕಾಲಾವಧಿಯಲ್ಲಿ ಬೆಲೆ ಏರಿಕೆ ಮತ್ತು ಅಗತ್ಯ ವಸ್ತುಗಳ ಕೊರತೆಯಿಂದ ಜನರಿಗೆ ಸಮಸ್ಯೆಯಾಗದ ರೀತಿಯಲ್ಲಿ ನಿತ್ಯೋಪಯೋಗಿ ಸಾಮಗ್ರಿ ಪೂರೈಸಲು ಸರ್ಕಾರ ಬದ್ಧವಾಗಿರುವುದಾಗಿ ಅರಣ್ಯ ಮತ್ತು ವನ್ಯಜೀವಿ ಸಚಿವ ಎ.ಕೆ.ಶಶೀಂದ್ರನ್ ಹೇಳಿದರು.

ಕಾಸರಗೋಡು ಜಿಲ್ಲಾ ನಾಗರಿಕ ಪೂರೈಕೆ ಇಲಾಖೆಯ ಸಪ್ಲೈಕೋ ವತಿಯಿಂದ ಕಾಸರಗೋಡು ಜಿಲ್ಲೆಯ ಕಾಞಂಗಾಡ್ ವೈಟ್‌ಲೈನ್ ಕಾಂಪ್ಲೆಕ್ಸ್ ಬಳಿ ಆರಂಭಿಸಲಾದ ಜಿಲ್ಲಾಮಟ್ಟದ ಓಣಂ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ಕಾಞಂಗಾಡು ನಗರಸಭಾ ಅಧ್ಯಕ್ಷೆ ಕೆ.ವಿ.ಸುಜಾತಾ ಮೊದಲ ಮಾರಾಟ ನಡೆಸಿಕೊಟ್ಟರು. ಕಾಞಂಗಾಡ್ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ಕೆ.ವಿ.ಶ್ರೀಲತಾ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಪಿ.ಕೆ.ನಿಶಾಂತ್, ಪಿ.ವಿ.ಸುರೇಶ್, ಬಂಗಳಂ ಕುಞಿಕೃಷ್ಣನ್, ಕುರಿಯಕೋಸ್ ಪ್ಲಾಪರಂಬಿಲ್, ಕರಿಯುಂ ಚಂದೇರಾ, ವಿ.ವೆಂಕಟೇಶ್, ಕೆ.ವಿ.ರಾಮಚಂದ್ರನ್, ಉದಿನೂರು ಸುಕುಮಾರನ್, ಕೆ.ಸಿ.ಮುಹಮ್ಮದ್ ಕುಞಿ, ಪ್ರಮೋದ್ ಕರುವಾಲಂ, ಪಿ.ಟಿ.ನಂದಕುಮಾರ್ ಉಪಸ್ಥಿತರಿದ್ದರು. ಸಪ್ಲೈಕೋ ಡಿಪೋ ವ್ಯವಸ್ಥಾಪಕ ಸಿ.ರವೀಂದ್ರನ್ ಸ್ವಾಗತಿಸಿದರು. ಜಿಲ್ಲಾ ನಾಗರಿಕ ಪೂರೈಕೆ ಅಧಿಕಾರಿ ಕೆ.ಎನ್.ಬಿಂದು ವಂದಿಸಿದರು.