ಜಿಲ್ಲೆ

ಸಂಸ್ಕೃತಿಯ ಪ್ರತೀಕವಾಗಿರಲಿ ಮಕ್ಕಳು : ಅರವಿಂದ್ ಬೋಳಾರ್ ಅನಿಸಿಕೆ : ಸುಳ್ಯದಲ್ಲಿ ಓಣಂ ಸಡಗರ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಸುಳ್ಯ

ಭಾರತೀಯ ಸಮಾಜ ಸುಳ್ಯ ವಲಯ ಸಮಿತಿ, ನಗರ ಹಾಗೂ ವಿವಿಧ ಗ್ರಾಮ ಸಮಿತಿಗಳ ಆಶ್ರಯದಲ್ಲಿ ಅದ್ದೂರಿಯಾಗಿ ಮೂರನೇ ವರ್ಷದ ಓಣಂ ಆಚರಣೆ ಸೋಮವಾರ ಅಂಬೆಟಡ್ಕದಲ್ಲಿ ನಡೆಯಿತು.

ಓಣಂ ಸಂಭ್ರಮಾಚರಣೆಯ ಕಾರ್ಯಕ್ರಮವನ್ನು ಕುಂಞ್ಞರಾಮನ್ ಉದ್ಘಾಟಿಸಿದರು. ಬಳಿಕ ಮಕ್ಕಳು, ಪುರುಷ, ಮಹಿಳೆಯರಿಗೆ ಪ್ರತ್ಯೇಕವಾಗಿ ಆಟೋಟ ಸ್ಪರ್ಧೆಗಳು ನಡೆದವು. ಬಳಿಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಿತು.

ರಂಗಭೂಮಿ ಹಾಗೂ ತುಳು ಸಿನಿಮಾ ಕಲಾವಿದ ಅರವಿಂದ ಬೋಳಾರ್ ಮಾತನಾಡಿ, ಮಹಿಳೆಯರು ಮತ್ತು ಯುವಕರು ನಮ್ಮ ಸಮುದಾಯದ ಸಂಸ್ಕೃತಿಗಳನ್ನು ಉಳಿಸುವ ನಿಟ್ಟಿನಲ್ಲಿ ಸಂಸ್ಕೃತಿಯ ಪ್ರತೀಕವಾಗಿ ಇರಬೇಕು. ಅಲ್ಲದೇ ಹೆಣ್ಣು ಮಕ್ಕಳು ಹಣೆಗೆ ಕುಂಕುಮ, ಲಕ್ಷಣವಾಗಿ ತಲೆಬಾಚಿ ಸೀರೆಯುಟ್ಟು ಮನೆಯಿಂದ ಹೊರಬರಬೇಕು ಎಂದು ಹೇಳಿದರು.

ಭಾರತೀಯ ತೀಯ ಸಮಾಜ ಕೇಂದ್ರ ಸಮಿತಿ ಅಧ್ಯಕ್ಷ ಪ್ರಸ್ತುತ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸದಾಶಿವ ಉಳ್ಳಾಲ್, ಪ್ರೇಮಚಂದ್, ರಾಕೇಶ್ ಕುತ್ತಮೊಟ್ಟೆ, ಸುನೀಲ್ ಕೆ.ಸಿ.ಉಪಸ್ಥಿತರಿದ್ದರು. ಪವಿತ್ರನ್ ಗುಂಡ್ಯ ಅಧ್ಯಕ್ಷತೆ ವಹಿಸಿದ್ದರು.