ಚಿಕ್ಕೋಡಿ-ನಿಪ್ಪಾಣಿ ಮಾರ್ಗದಲ್ಲಿ ಸಂಚರಿಸುವ ಬಸ್ಸುಗಳ ವೇಳಾಪಟ್ಟಿ ಸರಿಪಡಿಸುವಂತೆ ಚಿಕ್ಕೋಡಿ ಘಟಕ ವ್ಯವಸ್ಥಾಪಕ ವಿನೋದ ಅಮ್ಮಣಗಿ ಅವರಿಗೆ ಮನವಿ ಸಲ್ಲಿಸಲಾಯಿತು. ಚಂದ್ರಕಾಂತ ಹುಕ್ಕೇರಿ, ಉತ್ತಮ ಶಿಂಧೆ, ರಣಜಿತ ಶಿಂಧೆ, ರವೀಂದ್ರ ಹಂಪಣ್ಣವರ ಇತರರಿದ್ದರು. 
ಜಿಲ್ಲೆ

ಸಮಯಕ್ಕೆ ಸರಿಯಾಗಿ ಬಸ್ ಓಡಿಸಲಿ

ಪ್ರಶಾಂತ ಹೂಗಾರ

ಚಿಕ್ಕೋಡಿ: ಚಿಕ್ಕೋಡಿ-ನಿಪ್ಪಾಣಿ ಮತ್ತು ನಿಪ್ಪಾಣಿ-ಚಿಕ್ಕೋಡಿ ಮಾರ್ಗದಲ್ಲಿ ಸಂಚರಿಸುವ ಬಸ್ಸುಗಳ ಸಮಯ ವಿದ್ಯಾರ್ಥಿಗಳಿಗೂ ಅನುಕೂಲವಾಗುವಂತೆ ಸರಿಪಡಿಸಬೇಕು ಎಂದು ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ನೇತೃತ್ವದಲ್ಲಿ ಚಿಕ್ಕೋಡಿ ಘಟಕ ವ್ಯವಸ್ಥಾಪಕ ವಿನೋದ ಅಮ್ಮಣಗಿ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ದಿನನಿತ್ಯ ಅನೇಕ ಬಸ್ ಓಡಾಡುತ್ತಿವೆ. ಆದರೆ 9.30ರಿಂದ 10.30 ಹಾಗೂ ಸಂಜೆ 4.30ರಿಂದ 5.30ರ ವೇಳೆಯಲ್ಲಿ ಶಾಲಾ ಮಕ್ಕಳ ಸಂಚಾರಕ್ಕೆ ಬಸ್ ಸೌಲಭ್ಯವಿಲ್ಲ. ಸಮಯಕ್ಕೆ ಮುಂಚೆ ಒಮ್ಮೆಲೆ 3 ರಿಂದ 4 ಬಸ್‌ಗಳು ಬರುತ್ತವೆ. ಚಾಲಕ-ನಿರ್ವಾಹಕರಿಗೆ ಒಂದು ಸರಿಯಾದ ವೇಳಾಪಟ್ಟಿಯಿಲ್ಲ. ಅವರಿಷ್ಟದಂತೆ ಬಸ್ ಓಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ಆರ್‌ಡಿ ಮಹಾವಿದ್ಯಾಲಯದ ಪ್ರಾಂಶುಪಾಲ ಉತ್ತಮ ಶಿಂಧೆ, ಅಲ್ಲಮಪ್ರಭು ಅನ್ನದಾನ ಸಮಿತಿ ಅಧ್ಯಕ್ಷ ರಣಜಿತ ಶಿಂಧೆ, ವ್ಯಾಪಾರಸ್ಥ ರವೀಂದ್ರ ಹಂಪಣ್ಣವರ ಹಾಗೂ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಸಂಜು ಬಡಿಗೇರ ಉಪಸ್ಥಿತರಿದ್ದರು.