ಜಿಲ್ಲೆ

ಶರಭವತಾರಿ ಶ್ರೀ ವೀರಭದ್ರೇಶ್ವರ ರಥೋತ್ಸವ 8ರಂದು

ರಟ್ಟಿಹಳ್ಳಿ: ಪಟ್ಟಣದ ಐತಿಹಾಸಿಕ ಪ್ರಸಿದ್ಧ ಶರಭವತಾರಿ ಶ್ರೀ ವೀರಭದ್ರೇಶ್ವರ ಸ್ವಾಮಿಯ ಗುಗ್ಗಳ ಹಾಗೂ ರಥೋತ್ಸವ ನಿಮಿತ್ತ ವಿವಿಧ ಧಾರ್ವಿುಕ ಕಾರ್ಯಕ್ರಮಗಳು ಶುಕ್ರವಾರದಿಂದ ಆರಂಭಗೊಂಡಿದ್ದು, ಏ. 8ರಂದು ದೊಡ್ಡರಥೋತ್ಸವ ಜರುಗಲಿದೆ.

ಏ. 5ರಂದು ಆನೆ ಉತ್ಸವ, ಏ. 6ರಂದು ಹೂವಿನ ತೇರು ರಾತ್ರಿ 8 ಗಂಟೆಗೆ ಜರುಗಲಿದೆ. ಏ. 7ರಂದು ಸ್ವಾಮಿಗೆ ಎಡೆ ಕೊಡುವುದು, ಜವಳ, ಹರಕೆ, ಮುಡುಪು ಒಪ್ಪಿಸುವುದು.

ಏ. 8ರಂದು ಬೆಳಗ್ಗೆ 6 ಗಂಟೆಗೆ ದೊಡ್ಡರಥೋತ್ಸವ ಮತ್ತು ಗುಗ್ಗಳ ಮಹೋತ್ಸವ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.