ಅಯ್ಯಪ್ಪ ತಾತ 
ಜಿಲ್ಲೆ

4ರಂದು ಶ್ರೀಗುರು ಸಿದ್ಧರಾಮೇಶ್ವರ ಜಾತ್ರೋತ್ಸವ

ನರೇಶ್ ಕುಮಾರ್

ಕವಿತಾಳ: ಹೀರಾ ಗ್ರಾಮದಲ್ಲಿ ಮಾ.4ರಂದು ಶ್ರೀ ಗುರು ಸಿದ್ಧರಾಮೇಶ್ವರ ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಮಠದ ಪೀಠಾಧಿಪತಿ ಅಯ್ಯಪ್ಪ ತಾತ ತಿಳಿಸಿದರು.

ಶನಿವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ರೆ ಅಂಗವಾಗಿ ಮಾ.3ರಂದು ಸಂಜೆ 6 ಗಂಟೆಗೆ ಮುತ್ತೈದೆಯರಿಂದ ಉಚ್ಚಾಯ ಮಹೋತ್ಸವ, ಮಾ.4ರಂದು ಹರಗುರು ಚರಮೂರ್ತಿಗಳು, ಭಕ್ತರ ಸಮ್ಮುಖದಲ್ಲಿ ಸಿದ್ಧರಾಮೇಶ್ವರ ರಥೋತ್ಸವ ಜರುಗಲಿದೆ. ಮಾ.5ರಂದು ಎರಡನೇ ವರ್ಷದ ದನಗಳ ಜಾತ್ರೆ, ಮಾ.6ರಂದು ಕಡುಬಿನ ಕಾಳಗ ಏರ್ಪಡಿಸಲಾಗಿದೆ.

ಹೀರಾ ಮತ್ತು ಸುತ್ತಲಿನ ಗ್ರಾಮದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು. ಮಠದ ಉತ್ತತಾಧಿಕಾರಿ ನರಸಣ್ಣ ತಾತ, ಹನುಮಂತರಾಯ ಗೌಡ ಮಾಪಾ, ಮಲ್ಲಿಕಾರ್ಜುನ, ಸಿದ್ದಪ್ಪ ಸಹುಕಾರ, ಅಯ್ಯಪ್ಪ ದೊರೆ, ಗ್ರಾಪಂ ಅಧ್ಯಕ್ಷ ವಿಕ್ರಂಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಧನಂಜಯ್ಯ ಇತರರಿದ್ದರು.