ಜಿಲ್ಲೆ

26ರಂದು ಮೌನ ಲಿಂಗಾನುಷ್ಠಾನ ಸಂಪನ್ನ

ಎಂ.ಕೆ.ಹುಬ್ಬಳ್ಳಿ: ಸಮೀಪದ ದೇವರಶೀಗಿಹಳ್ಳಿ ಗ್ರಾಮದ ಶ್ರೀಗುರು ಮಡಿವಾಳೇಶ್ವರ ಮಠದ ವೀರೇಶ್ವರ ಶ್ರೀಗಳು ಲೋಕ ಕಲ್ಯಾಣಾರ್ಥವಾಗಿ 30 ದಿನಗಳ ಕಾಲ ಮೌನ ಲಿಂಗಾನುಷ್ಠಾನ ಕೈಗೊಂಡಿದ್ದಾರೆ. ಜ್ಯೇಷ್ಠ ಮಾಸದ ನಿಮಿತ್ತ ಮೇ 28ರಿಂದ ಶ್ರೀಗಳು ಕೆಗೊಂಡಿರುವ ಮೌನ ಲಿಂಗಾನುಷ್ಠಾನ ಜೂ.26ರಂದು ಪೂರ್ಣಗೊಳ್ಳಲಿದೆ. ಇದು ಶ್ರೀಗಳು ಕೈಗೊಂಡಿರುವ 6ನೇ ಮೌನ ಲಿಂಗಾನುಷ್ಠಾನವಾಗಿದೆ. ಜೂ.26ರಂದು ಹೆಬ್ಬಾಳ ಗ್ರಾಮದ ಸದ್ಭಕ್ತರಿಂದ ಶ್ರೀಗಳ ತುಲಾಭಾರ ನೆರವೇರಲಿದೆ. ಹಲವು ಧಾರ್ಮಿಕ ಕಾರ್ಯಕ್ರಮ ನೆರವೇರಲಿದ್ದು, ವಿವಿಧ ಶ್ರೀಗಳು, ಜನಪ್ರತಿನಿಧಿಗಳು, ಗಣ್ಯರು ಮತ್ತು ಭಕ್ತರು ಪಾಲ್ಗೊಳ್ಳಲಿದ್ದಾರೆ.