ಮಾರೆಪ್ಪ ಹರವಿ 
ಜಿಲ್ಲೆ

26ರಂದು ಸಂವಿಧಾನ ಸಂರಕ್ಷಕರ ಸಮಾವೇಶ

ನರೇಶ್ ಕುಮಾರ್

ಸಿಂಧನೂರು: ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ದಾವಣಗೆರೆಯಲ್ಲಿ ಏ.26 ರಂದು ಸಂವಿಧಾನ ಸಂರಕ್ಷಕರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜನಶಕ್ತಿ ಸಂಘಟನೆ ಜಿಲ್ಲಾಧ್ಯಕ್ಷ ಮಾರೆಪ್ಪ ಹರವಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಡಾ.ಅಂಬೇಡ್ಕರ್ ಅವರ ಮೊಮ್ಮಗ ಆನಂದ ತೇಲ್ತುಂಬೆ, ನರ್ಮದಾ ಬಚಾವೋ ಹೋರಾಟದ ರೂವಾರಿ ಮೇಧಾ ಪಾಟ್ಕರ್, ಯುವ ಹೋರಾಟಗಾರ ಜಿಗ್ನೇಶ ಮೇವಾನಿ ಸೇರಿದಂತೆ ರಾಜ್ಯದ ಅನೇಕ ಹೋರಾಟಗಾರರು, ಚಿಂತಕರು, ಸಾಹಿತಿಗಳು ಭಾಗವಹಿಸಲಿದ್ದಾರೆ. ಸಿಂಧನೂರು ತಾಲೂಕು ಸೇರಿದಂತೆ ಜಿಲ್ಲೆಯಿಂದ ಸಾವಿರಾರು ಜನರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ದಲಿತ ಮುಖಂಡ ಎಚ್.ಎನ್.ಬಡಿಗೇರ್, ಎದ್ದೇಳು ಕರ್ನಾಟಕ ಸಂಘಟನೆ ಜಿಲ್ಲಾ ಸಂಯೋಜಕರಾದ ಖಾಜಾ ಅಸ್ಲಾಂ ಅಹ್ಮದ್, ಶರಣಬಸವ ಮುದ್ದನಗುಂಡಿ, ಮುಖಂಡರಾದ ಟಿ.ಹುಸೇನಸಾಬ್, ಬಸವರಾಜ ಬಾದರ್ಲಿ, ನಾರಾಯಣ ಬೆಳಗುರ್ಕಿ, ರಾಮಣ್ಣ ಹಿರೇಬೇರಿಗಿ, ಮೌನೇಶ ಜಾಲವಾಡಿಗಿ, ಶಿವಪುತ್ರಪ್ಪ ತುರ್ವಿಹಾಳ, ಬಸವರಾಜ ಬಾಗಲವಾಡ ಇದ್ದರು.