ಹಾಜಿಬಾಬು ಕಲ್ಯಾಣಿ 
ಜಿಲ್ಲೆ

24ರಂದು ನೂತನ ನಿರ್ದೇಶಕರ ಪದಗ್ರಹಣ

ನರೇಶ್ ಕುಮಾರ್

ಲಿಂಗಸುಗೂರು: ಪಟ್ಟಣದ ಶಂಕರರಡ್ಡಿ ಕಲ್ಯಾಣ ಮಂಟಪದಲ್ಲಿ ಮಾ.24ರಂದು ಸಂಘದ ನೂತನ ನಿರ್ದೇಶಕರ ಪದಗ್ರಹಣ ಮತ್ತು ಸೇವಾ ನಿಯಮಗಳ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಹಾಜಿಬಾಬು ಕಲ್ಯಾಣಿ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಐದು ಜನ ಪ್ರಗತಿಪರ ರೈತರು, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ 60ಕ್ಕೂ ಹೆಚ್ಚು ನಿವೃತ್ತ ಯೋಧರನ್ನು ಸನ್ಮಾನಿಸಲಾಗುವುದು. ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಹಾಗೂ ಅವರ ಕೇಂದ್ರ ತಂಡ ಆಗಮಿಸಲಿದೆ.

ಸಹಕಾರ ಸಂಘಗಳ ನಿವೃತ್ತ ನಿಬಂಧಕ ಲಿಯಾಖತ್ ಅಲಿ ಅವರು ಸೇವಾ ನಿಯಮಗಳ ಕಾರ್ಯಾಗಾರ ನಡೆಸಿಕೊಡಲಿದ್ದಾರೆ. ಸಂಸದರು, ಶಾಸಕರು, ಎಂಎಲ್ಸಿ, ಸಾಹಿತಿಗಳು, ನಿವೃತ್ತ ನೌಕರರು ಭಾಗವಹಿಸಲಿದ್ದಾರೆಂದು ತಿಳಿಸಿದರು.

ಸಂಘದ ರಾಜ್ಯ ಪರಿಷತ್ ಸದಸ್ಯ ರಾಮಕೃಷ್ಣ, ತಾಲೂಕು ಕಾರ್ಯದರ್ಶಿ ವೀರೇಶ ಸಿರಸಂಗಿ, ಪ್ರಮುಖರಾದ ಭೀಮಣ್ಣ ನಾಯಕ, ಅಮರೇಶಪ್ಪ ಹೂನೂರು, ಅಮರಪ್ಪ ಸಾಲಿ, ಶೆಟ್ಟೆಪ್ಪ ನಾಯ್ಕ ಇದ್ದರು.