ಜಿಲ್ಲೆ

16 ರಂದು ಒಳಮೀಸಲಾತಿ ಹೋರಾಟ

ಗಿರೀಶ ಸಗರ

ನಿಡಗುಂದಿ: ಪರಿಶಿಷ್ಟರಿಗೆ ಒಳಮೀಸಲಾತಿ ಅನುಷ್ಠಾನ ಕುರಿತು ಸುಪ್ರೀಂಕೋರ್ಟ್​ ತೀರ್ಪು ನೀಡಿದ್ದರೂ ಸರ್ಕಾರ ಒಳಮೀಸಲಾತಿ ಜಾರಿಗೆ ಮೀನಮೇಷ ಎಣಿಸುತ್ತಿರುವ ಹಿನ್ನೆಲೆಯಲ್ಲಿ ಅ.16 ರಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಒಳಮೀಸಲು ಜಾರಿಗೆ ಬೃಹತ್​ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯ ತಿಪ್ಪಣ್ಣ ಮಾದರ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಶಿಷ್ಟ ಜಾತಿಗಳಲ್ಲೇ ಅಸ್ಪಶ್ಯರಾಗಿ ಗುರುತಿಸಿಕೊಂಡು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದ ತಳ ಸಮಾಜಗಳಲ್ಲಿ ಸುಪ್ರೀಂಕೋರ್ಟ್​ ತೀರ್ಪಿನಿಂದ ಹೊಸ ಭರವಸೆ ಚಿಗುರೊಡೆದಿದೆ. ಕೂಡಲೇ ಸಿದ್ದರಾಮಯ್ಯ ಸರ್ಕಾರ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

16 ರಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮುಖಾಂತರ ಸಿಎಂ ಹಾಗೂ ರಾಜ್ಯಪಾಲರಿಗೆ ಪರಿಶಿಷ್ಟ ಜಾತಿಗಳ ಮೀಸಲಾತಿ ಜಾರಿ ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಗುತ್ತಿದೆ ಎಂದರು.

ಮಾದಿಗ ಮೀಸಲಾತಿ ಹೋರಾಟ ಸಮಿತಿ ಉಪಾಧ್ಯ ಪ್ರಹ್ಲಾದ ಕರಿಯಣ್ಣವರ, ಮುಖಂಡರಾದ ವಸಂತ ಹೊಳೆಯಣ್ಣವರ, ರಾಜು ಚಳ್ಳಮರದ, ಡಿ.ಬಿ.ಮುದೂರ, ತಮ್ಮಣ್ಣ ಕಾನಾಗಡ್ಡಿ, ಮೌನೇಶ ಪೂಜಾರಿ, ಶಾಂತು ಹಚ್ಚಾಳ, ಪರಶುರಾಮ ಭಾವಿಕಟ್ಟಿ, ಹಣಮಂತ ಬಿರಾದಾರ, ಪರಶುರಾಮ ರೋಣಿಹಾಳ, ಸುಭಾಸ ಕಟ್ಟಿಮನಿ ಇತರರಿದ್ದರು.