ಜಿಲ್ಲೆ

ನ.18 ರಂದು ಪಾವಡಿ ಬಸವೇಶ್ವರ ರಥೋತ್ಸವ

ರುದ್ರಪ್ಪ ವಾಲಿ

ಮಾನ್ವಿ: ಪಟ್ಟಣದ ವೀರಭದ್ರೇಶ್ವರ ಮತ್ತು ಪಾವಡಿ ಬಸವೇಶ್ವರ ದೇವಸ್ಥಾನದಲ್ಲಿ ನ.18 ರಂದು 20ನೇ ವರ್ಷದ ಕಾರ್ತಿಕ ಮಾಸದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ.

ಬೆಳಗ್ಗೆ ಶ್ರೀ ವೀರಭದ್ರೇಶ್ವರ ಹಾಗೂ ಪಾವಡಿ ಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ, ಕುಂಬಾಭಿಷೇಕ ಅಂಗವಾಗಿ ತುಂಗಭದ್ರಾ ನದಿಯಲ್ಲಿ ಗಂಗೆ ಪೂಜೆ ನೆರವೇರಿಸಿ ನಂತರ ಸುಮಂಗಲಿಯರಿಂದ ಕುಂಭ, ಕಳಸದೊಂದಿಗೆ ಪಟ್ಟದ ಪ್ರಮುಖ ಬೀದಿಗಳಲ್ಲಿ ಪುರವಂತಿಕೆ ಸೇವೆ, ಜೋಡಿ ನಂದಿಕೋಲು ಸೇವೆ ಯೊಂದಿಗೆ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ನಂತರ ದೇವಸ್ಥಾನದ ಆವರಣದಲ್ಲಿನ ಅಗ್ನಿಕುಂಡದಲ್ಲಿ ಭಕ್ತರಿಂದ ಕೆಂಡ ತುಳಿಯುವ ಸೇವೆ ನಡೆಯಲಿದೆ ಭಕ್ತರು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ವೀರಭದ್ರೇಶ್ವರ ಪಾವಡಿ ಬಸವೇಶ್ವರ ದೇವಸ್ಥಾನ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.