ಮಸ್ಕಿ: ತಾಲೂಕಿನ ಅಂಕುಶದೊಡ್ಡಿಯ ರಂಭಾಪುರಿ ಶಾಖಾ ಬೃಹನ್ಮಠದಲ್ಲಿ ಮೇ 2ರಂದು ಶ್ರೀ ಭ್ರಮರಾಂಬ ದೇವಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಾಶಿ ಪೀಠದ (ಹಿರಿಯ ಶ್ರೀಗಳು) ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಮಹೋತ್ಸವ, ತುಲಾಭಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ವಾಮದೇವ ಶಿವಾಚಾರ್ಯರು ಹೇಳಿದರು.
ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಕಲ ವಾದ್ಯಮೇಳಗಳೊಂದಿಗೆ ಕಾಶಿ ಜಗದ್ಗುರುಗಳ ಗ್ರಾಮ ಪ್ರವೇಶ, 108 ಕುಂಭಗಳ ಮಹೋತ್ಸವ ಜರುಗಲಿದೆ. ನಂತರ 10 ಗಂಟೆಗೆ ಧರ್ಮಸಭೆ ನೆರವೇರಲಿದೆ. ಬಳಗನೂರಿನ ವೀರಭದ್ರ ಶಿವಾಚಾರ್ಯರು, ನಂದವಾಡಗಿಯ ಮಹಾಂತಲಿಂಗ ಶಿವಾಚಾರ್ಯರು, ದೇವದುರ್ಗದ ಡಾ.ಪಂಚಾಕ್ಷರಿ ಶಿವಾಚಾರ್ಯರು, ರಾಯಚೂರಿನ ಅಭಿನವ ರಾಚೋಟಿವೀರ ಶಿವಾಚಾರ್ಯರು, ಗಬ್ಬೂರಿನ ಬೂದಿಬಸವೇಶ್ವರ ಶಿವಾಚಾರ್ಯರು, ಗುರುಗುಂಟಾದ ಸದಾನಂದ ಶಿವಾಚಾರ್ಯರು, ಮಾನ್ವಿ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯರು,
ಯದ್ದಲದೊಡ್ಡಿಯ ಮಹಾಲಿಂಗ ಶ್ರೀಗಳು, ಮಸ್ಕಿಯ ವರರುದ್ರಮುನಿ ಶಿವಾಚಾರ್ಯರು, ಸಂತೆಕೆಲ್ಲೂರಿನ ಗುರುಬಸವ ಶ್ರೀಗಳು, ಮಹಾಂತಲಿಂಗ ಶಿವಾಚಾರ್ಯರು, ಅಭಿನವ ಗಜದಂಡ ಶಿವಾಚಾರ್ಯರು, ಅಭಿನವ ಸೋಮನಾಥ ಶಿವಾಚಾರ್ಯರು,
ಅಂಕಲಿಮಠ ವೀರಭದ್ರ ಸ್ವಾಮೀಜಿ, ಹುನುಕುಂಟಿ ಶರಣಯ್ಯ ತಾತ ಭಾಗವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಸಂಸದ ರಾಜಶೇಖರ ಹಿಟ್ನಾಳ, ಶಾಸಕ ಆರ್.ಬಸನಗೌಡ ತುರ್ವಿಹಾಳ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಎಂಎಲ್ಸಿ ಶರಣಗೌಡ ಬಯ್ಯಪುರ ಇತರರು ಭಾಗವಹಿಸುವರು ಎಂದು ತಿಳಿಸಿದರು.