ಸಿಂಧನೂರು: ಹೊಗರನಾಳ ಗ್ರಾಮದಲ್ಲಿ ಮಾ.27ರಂದು ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮಾಂಬೆ ಮತ್ತು ಶ್ರೀ ಮಲ್ಲಿಕಾರ್ಜುನ ದೇವರ ಮಹಾರಥೋತ್ಸವ ಜರುಗಲಿದೆ.
ಬೆಳಗ್ಗೆ ಮಲ್ಲಮಾಂಬೆ ಮತ್ತು ಮಲ್ಲಿಕಾರ್ಜುನ ದೇವರ ಮೂರ್ತಿಗಳಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿವೆ. ನಂತರ ಮಹಿಳೆಯರಿಂದ ಕುಂಭೋತ್ಸವ, ಭೂರಿ ಗಣಾರಾಧನೆ ಜರುಗಲಿದೆ. ಮಧ್ಯಾಹ್ನ ಕಲ್ಮಂಗಿ ಹಾಗೂ ಗುಡಿಹಾಳ ಗ್ರಾಮದ ಭಕ್ತರಿಂದ ಬರುವ ಉತ್ಸವ ಮೂರ್ತಿ ಹಾಗೂ ಕಳಸಕ್ಕೆ ಸ್ವಾಗತ ನೀಡಲಾಗುವುದು. ಸಂಜೆ 5 ಗಂಟೆಗೆ ಮಲ್ಲಮಾಂಬೆ ಮಹಿಳಾ ರಥೋತ್ಸವ ಹಾಗೂ ಮಲ್ಲಿಕಾರ್ಜುನ ದೇವರ ಮಹಾರಥೋತ್ಸವ ಅದ್ದೂರಿಯಿಂದ ಜರುಗಲಿದೆ.
ಕೊಪ್ಪಳ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹೊಗರನಾಳದ ಸಿದ್ದಯ್ಯಸ್ವಾಮಿ, ಅಮರಯ್ಯಸ್ವಾಮಿ ಇತರರು ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.