ಬೆಂಗಳೂರು: ನಿವೇಶನ, ಫ್ಲ್ಯಾಟ್ ಖರೀದಿಗಾಗಿ ಸಾರ್ವಜನಿಕರು ಬಿಡಿಎ ಕಚೇರಿಗೆ ಅಲೆಯುವ ತಾಪತ್ರಯ ತಪ್ಪಿಸಲು ದೆಹಲಿ ಅಭಿವೃದ್ಧಿ ಪ್ರಾಧಿಕಾರದ ವ್ಯವಸ್ಥೆ ಜಾರಿಗೊಳಿಸಲು ಬಿಡಿಎ ಅಧಿಕಾರಿಗಳು ಮುಂದಾಗಿದ್ದಾರೆ.
ಬಿಡಿಎ ನಿಮಿರ್ಸಿರುವ ಬಡಾವಣೆಗಳಲ್ಲಿನ ನಿವೇಶನ ಅಥವಾ ಫ್ಲ್ಯಾಟ್ ಖರೀದಿಗೆ ಅಜಿರ್ ಸಲ್ಲಿಸುವ ಸಾರ್ವಜನಿಕರು ದಾಖಲೆಗಳ ಸಲ್ಲಿಕೆ, ದಾಖಲೆಗಳ ಪರಿಶೀಲನೆ, ಶುಲ್ಕ ಪಾವತಿ ಹೀಗೆ ಹಲವು ಪ್ರಕ್ರಿಯೆಗಾಗಿ ಬಿಡಿಎ ಕಚೇರಿಗಳಿಗೆ ಅಲೆಯಬೇಕಾಗುತ್ತದೆ. ಒಮ್ಮೆ ಅರ್ಜಿ ಸಲ್ಲಿಸಿದವರು, ದಿನಗಟ್ಟಲೆ ಅದೇ ಕೆಲಸ ಮಾಡಬೇಕಿದೆ. ಈ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಮುಂದಾಗಿರುವ ಬಿಡಿಎ ಅಧಿಕಾರಿಗಳು, ಎಲ್ಲವನ್ನೂ ಆನ್ಲೈನ್ ವ್ಯವಸ್ಥೆ ಜಾರಿಗೊಳಿಸಲು ಕ್ರಮ ಕೈಗೊಳ್ಳುತ್ತಿದ್ದಾರೆ. ಅದರಂತೆ ಸಾರ್ವಜನಿಕರು ಆನ್ಲೈನ್ ಮೂಲಕವೇ ಅಜಿರ್ ಸಲ್ಲಿಸಿ, ಆರಂಭಿಕ ಶುಲ್ಕ ಪಾವತಿಸಬೇಕಿದೆ. ಅದಾದ ನಂತರ ನಿವೇಶನ ಅಥವಾ ಫ್ಲ್ಯಾಟ್ ನೋಂದಣಿ ಸಮಯದಲ್ಲಿ ಬಿಡಿಎ ಕಚೇರಿ ಅಥವಾ ಉಪನೋಂದಣಿ ಕಚೇರಿಗೆ ಬಂದರೆ ಸಾಕಾಗಲಿದೆ.
ದೆಹಲಿ ಮಾದರಿ: ಸದ್ಯ ದೆಹಲಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ಆನ್ಲೈನ್ ವ್ಯವಸ್ಥೆ ಜಾರಿಯಲ್ಲಿದೆ. ಅಲ್ಲೂ ಕೂಡ ಎಲ್ಲ ಪ್ರಕ್ರಿಯೆಯೂ ಆನ್ಲೈನ್ ಮೂಲಕವೇ ನಡೆಯಲಿದೆ. ಅದೇ ಮಾದರಿಯನ್ನು ಇದೀಗ ಬಿಡಿಎ ಅಳವಡಿಸಿಕೊಳ್ಳಲು ಮುಂದಾಗಿದೆ. ಅದಕ್ಕಾಗಿ ಪ್ರತ್ಯೇಕ ವೆಬ್ಸೈಟ್ ತೆರೆಯಲು ಬಿಡಿಎ ಚಿಂತನೆ ನಡೆಸಿದೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..