ಎಂ.ಡಿ.ಅಮೀರ್ ಅಲಿ 
ಜಿಲ್ಲೆ

ಜು.9ರಂದು ಕರೆ ನೀಡಿರುವ ಕಾರ್ಮಿಕರ ಮುಷ್ಕರ ಬೆಂಬಲಿಸಿ

ನರೇಶ್ ಕುಮಾರ್

ಸಿಂಧನೂರು: ನಾಲ್ಕು ಕಾರ್ಮಿಕ ಕೋಡ್‌ಗಳ ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜು.9ರಂದು ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದು, ಎಲ್ಲ ಕಾರ್ಮಿಕರು ಬೆಂಬಲಿಸಬೇಕು ಎಂದು ಟಿಯುಸಿಐ ರಾಜ್ಯಾಧ್ಯಕ್ಷ ಎಂ.ಡಿ.ಅಮೀರ್ ಅಲಿ ಮನವಿ ಮಾಡಿದರು.

ನಗರಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾರ್ಮಿಕರ ಶ್ರಮದಿಂದ ಕಟ್ಟಲ್ಪಟ್ಟಿರುವ ಸರ್ಕಾರಿ ಸಂಸ್ಥೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಖಾಸಗೀಕರಣಗೊಳಿಸುತ್ತಿವೆ. ಇದಕ್ಕೆ ಬೇಕಾದ ಕಾನೂನು ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ದೇಶದ ದುಡಿಯುವ ವರ್ಗ ಹಾಗೂ ದಮನಿತರ ಬದುಕಿನ ಉದ್ಯೋಗ, ವೇತನ, ಜಮೀನು, ಕೃಷಿ ಉತ್ಪನ್ನ ದರ, ವಿದ್ಯೆ, ಆರೋಗ್ಯ ಸುರಕ್ಷೆ ಮುಂತಾದ ಮೂಲಭೂತ ಹಾಗೂ ಜ್ವಲಂತ ಸಮಸ್ಯೆಗಳನ್ನು ಮರೆಮಾಚಲು, ಹಿಂದು-ಮುಸ್ಲಿಮರ ಹೆಸರಿನಲ್ಲಿ ದ್ವೇಷದ ಬೆಂಕಿ ಹಬ್ಬಿಸಲಾಗಿದೆ.

ಇದು ಕಾರ್ಪೊರೇಟ್ ಬಂಡವಾಳಶಾಹಿ ಪ್ರೇರಿತ ಆರ್‌ಎಸ್‌ಎಸ್ ಫ್ಯಾಸಿಸ್ಟ್ ಆಳ್ವಿಕೆ ಆಗಿದೆ. ಇದನ್ನು ಹಿಮ್ಮೆಟ್ಟಿಸುವ ಅತಿ ದೊಡ್ಡ ಜವಾಬ್ದಾರಿ ಭಾರತದ ಎಲ್ಲ ಕಾರ್ಮಿಕ ವರ್ಗದ ಮೇಲಿದೆ ಎಂದು ತಿಳಿಸಿದರು.

ಉಪಾಧ್ಯಕ್ಷ ಎಂ.ಗಂಗಾಧರ ಮಾತನಾಡಿ, ಪ್ರತಿಯೊಂದು ಕಾರ್ಖಾನೆ, ಕಚೇರಿ, ಅಂಗಡಿಗಳು, ಪೌರ ಸೇವೆ ಸೇರಿದಂತೆ ಎಲ್ಲ ಕ್ಷೇತ್ರದ ಕಾರ್ಮಿಕರು ಒಗ್ಗೂಡಿ ಕೆಲಸ ನಿಲ್ಲಿಸಿ ಮುಷ್ಕರ ಬೆಂಬಲಿಸಬೇಕೆಂದರು. ರಾಜ್ಯ ಸಮಿತಿ ಸದಸ್ಯ ಜಿ.ತಿಪ್ಪರಾಜ, ಎಚ್.ಆರ್.ಹೊಸಮನಿ, ಬಸವರಾಜ ಹಿರೇ ಹೆಸರೂರ, ಮುದಿಯಪ್ಪ, ದರಗಯ್ಯ ಇದ್ದರು.