ಮಡಿಕೇರಿ: ಕಾವೇರಮ್ಮೆ ಕೊಡವ ಮತ್ತು ಅಮ್ಮಕೊಡವ ಹಿತರಕ್ಷಣಾ ಚಾರಿಚೇಬಲ್ ಟ್ರಸ್ಟ್ ವತಿಯಿಂದ ಕೊಡವ ಮತ್ತು ಅಮ್ಮಕೊಡವರ ಶಾಪಾ ವಿಮೋಚನೆಗಾಗಿ ವಿವಿಧ ಪೂಜಾ ಪುನಸ್ಕಾರ ಶ್ರೀ ಭಾಗಮಂಡಲ ಭಗಂಡೇಶ್ವರ ದೇವಾಸ್ಥಾನ ಮುಂಭಾಗದ ಬಯಲು ಪ್ರದೇಶದಲ್ಲಿ ಜ೧೫ರಂದು ನಡೆಯಲಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಎಂ.ಬಿ.ದೇವಯ್ಯ ತಿಳಿಸಿದರು.
ಕೊಡವರಿಗೆ(ಶ್ರೀ ಅಗಸ್ತೇಶ್ವರ ಸ್ವಾಮಿಯ ಶಾಪ) ಹಾಗೂ ಅಮ್ಮ ಕೊಡವರಿಗೆ(ಶ್ರೀ ಕಾವೇರಮ್ಮನ ಶಾಪ) ಇದ್ದ ಶಾಪ ವಿಮೋಚನೆಗೆಗಾಗಿ ಎರೆಡು ಜನಾಂಗದವರು ಪರಿಹಾರ ಮತ್ತು ಲೋಕ ಕಲ್ಯಾಣಕ್ಕಾಗಿ ವರ್ಷಂಪ್ರತಿ ಪೂಜೆ ಸಲ್ಲಿಸಲಾಗುತ್ತಿದೆ. ಅದರಂತೆ ಅಂದು ಗಣಪತಿ ಹೋಮ, ಚಂಡಿಕಾ ಹೋಮ, ಸತ್ಯನಾರಾಯಣ ಸ್ವಾಮಿ ಪೂಜೆ ಹಾಗೂ ಶಥರುದ್ರಾಭಿಷೇಕ ಪಠಣ ಕಾರ್ಯ ನಡೆಯಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಬೆಳಗ್ಗೆ ೭ ಗಂಟೆಗೆ ಪೂಜೆ ಪ್ರಾರಂಭವಾಗಲಿದೆ. ಭಕ್ತಾದಿಗಳು ಪಾಲ್ಗೊಂಡು ದೇವರ ತೀರ್ಥ ಪ್ರಸಾದಾ ಸ್ವೀಕರಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಚೆಪ್ಪುಡಿರ ಎಂ.ಪೊನ್ನಪ್ಪ, ಕಾರ್ಯದರ್ಶಿ ಮುಕ್ಕಾಟೀರ.ಎ.ನಾಣಯ್ಯ, ಟ್ರಸ್ಟಿಗಳಾದ ಪಾಸುರ.ಸಿ.ಕಾವೇರಪ್ಪ, ಇದ್ದರು.