ನಿಪ್ಪಾಣಿಯ ವಿಎಸ್‌ಎಂಎಸ್‌ಆರ್‌ಕೆಐಟಿಯಲ್ಲಿ ವಿಟಿಯುಗೆ ಅಗ್ರ ನೂರು ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಉಪಕುಲಪತಿ ಡಾ. ವಿದ್ಯಾಶಂಕರ ಎಸ್., ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಬಹುಮಾನ ವಿತರಿಸಿದರು. ಡಾ.ಡಾ.ವಿನೋದ ಸಸಾಲಟ್ಟಿ, ಡಾ.ಶಶಿಶಂಕರ ಎ., ಪಪ್ಪು ಪಾಟೀಲ ಇತರರಿದ್ದರು. 
ಜಿಲ್ಲೆ

ಬೇಡಿಕೆಗೆ ತಕ್ಕಂತೆ ಪಠ್ಯಕ್ರಮ

ಪ್ರಶಾಂತ ಹೂಗಾರ

ನಿಪ್ಪಾಣಿ: ಕಂಪನಿಗಳ ಕಾರ್ಯನಿರ್ವಹಣೆ ಹಾಗೂ ಔದ್ಯೋಗಿಕ ಕ್ಷೇತ್ರಗಳ ಬೇಡಿಕೆಗೆ ತಕ್ಕಂತೆ ತಾಂತ್ರಿಕ ಶಿಕ್ಷಣದ ಪಠ್ಯಕ್ರಮ ರೂಪಿಸಲು ಪ್ರಯತ್ನಿಸಲಾಗುತ್ತಿದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಉಪಕುಲಪತಿ ಡಾ. ವಿದ್ಯಾಶಂಕರ ಎಸ್. ಹೇಳಿದರು.

ನಗರದ ವಿಎಸ್‌ಎಂ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯ (ವಿಎಸ್‌ಎಂಎಸ್‌ಆರ್‌ಕೆಐಟಿ)ದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕನ್‌ಫ್ಲೂಯೆನ್ಸ್-2023 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತ್ವರಿತವಾಗಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಸಿಗುವ ನಿಟ್ಟಿನಲ್ಲಿ ಪ್ರತಿವರ್ಷ ಮೇ ಮಾಸದಲ್ಲಿ ಪರೀಕ್ಷೆ, ಆಗಸ್ಟ್‌ನಲ್ಲಿ ಘಟಿಕೋತ್ಸವ ಹಮ್ಮಿಕೊಳ್ಳುವ ಯೋಜನೆ ಇದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಎಸ್‌ಎಂ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಮಾತನಾಡಿ, ಗುಣಮಟ್ಟದ ಕಲಿಕಾ ಪದ್ಧತಿ, ಕೌಶಲಾಭಿವೃದ್ಧಿಗೆ ಆದ್ಯತೆ, ಆಟ-ಪಾಠಕ್ಕೆ ಒತ್ತು ನೀಡಿದ್ದರಿಂದ ಹಾಗೂ ಆಡಳಿತ ಮಂಡಳಿ ಕೆಲ ಯೋಜನೆಗಳಿಂದಾಗಿ ಪರೀಕ್ಷೆಯಲ್ಲಿ ನಮ್ಮ ಕಾಲೇಜು ಉತ್ತಮ ಲಿತಾಂಶ ಪಡೆಯುತ್ತಿದೆ. ವಿಟಿಯುಗೆ ಮೊದಲ ಹತ್ತು ಸ್ಥಾನ ಗಳಿಸುವ ವಿದ್ಯಾರ್ಥಿಗಳಿಗೆ ತಲಾ 25 ಸಾವಿರ ರೂ. 11 ರಿಂದ 50 ಸ್ಥಾನ ಗಳಿಸುವವರಿಗೆ ತಲಾ 15 ಸಾವಿರ ರೂ. ಮತ್ತು 51 ರಿಂದ 100 ಸ್ಥಾನ ಗಳಿಸುವವರಿಗೆ ತಲಾ 10 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು ಎಂದರು.


ಬೆಂಗಳೂರು ಮೆಟ್ರೋ ರೈಲ್ವೆ ಕಂಪನಿ ಉಪಮುಖ್ಯ ಇಂಜಿನಿಯರ್, ನಿವೃತ್ತ ಕರ್ನಲ್ ಡಾ. ವಿನೋದ ಸಸಾಲಟ್ಟಿ, ಬೆಂಗಳೂರಿನ
ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಯಾಧ್ಯಕ್ಷ ಡಾ.ಶಶಿಶಂಕರ ಎ., ಪ್ರಾಚಾರ್ಯ ಡಾ.ಉಮೇಶ ಪಾಟೀಲ ಮಾತನಾಡಿದರು.


ಕ್ರೀಡಾಸಾಧಕರು ಹಾಗೂ ಉನ್ನತ ಹುದ್ದೆ ಅಲಂಕರಿಸಿದ ಹಳೆಯ ವಿದ್ಯಾರ್ಥಿಗಳನ್ನು ಗಣ್ಯರು ಸತ್ಕರಿಸಿದರು. ವಿಟಿಯುಗೆ 2ನೇ ಸೆಮಿಸ್ಟರ್‌ನಲ್ಲಿ ಮೆಕಾನಿಕಲ್ ವಿಭಾಗದಲ್ಲಿ 3ನೇ ಸ್ಥಾನ ಗಳಿಸಿದ ಸಾಕ್ಷಿ ಹಡಲಗೆಗೆ 25 ಸಾವಿರ ರೂ., ಎಐಎಂಎಲ್ ವಿಭಾಗದಲ್ಲಿ 41ನೇ ಸ್ಥಾನ ಗಳಿಸಿದ ನೇಹಾ ಮಗದುಮ್ಮಗೆ 15 ಸಾವಿರ ರೂ., ಅನುಕ್ರಮವಾಗಿ 67 ಮತ್ತು 78ನೇ ಸ್ಥಾನ ಪಡೆದ ಶ್ವೇತಾ ಮೋಹಿತೆ, ಯಶ ಶಿಂಧೆ ಮತ್ತು ಮೆಕಾನಿಕಲ್‌ನಲ್ಲಿ 92ನೇ ಸ್ಥಾನ ಗಳಿಸಿದ ಅಂಜಲಿ ಕಲ್ಯಾಣಕರ ಅವರಿಗೆ ತಲಾ 10 ಸಾವಿರ ರೂ., ಇಸಿ ವಿಭಾಗದ ಮೂರನೆಯ ಸೆಮಿಸ್ಟರ್‌ನಲ್ಲಿ 2ನೇ ಸ್ಥಾನ ಗಳಿಸಿದ ಸುಗಂಧಾ ಅವರಿಗೆ 25 ಸಾವಿರ ರೂ. ಮತ್ತು 5ನೇ ಸೆಮಿಸ್ಟರ್‌ನಲ್ಲಿ ಮೆಕಾನಿಕಲ್‌ನಲ್ಲಿ 27ನೇ ಸ್ಥಾನ ಪಡೆದ ಯಶ ಮಗದುಮ್ಮಗೆ 15 ಸಾವಿರ ರೂ. ನಗದು ಬಹುಮಾನ ವಿತರಿಸಲಾಯಿತು.


ಸಂಸ್ಥೆ ಉಪಾಧ್ಯಕ್ಷ ಆನಂದ ಗಿಂಡೆ, ವೈಸ್-ಚೇರ್ಮನ್ ಪಪ್ಪು ಪಾಟೀಲ, ಕಾರ್ಯದರ್ಶಿ ಹರಿಶ್ಚಂದ್ರ ಶಾಂಡಗೆ, ಹಿರಿಯ ಸಂಚಾಲಕ ಚಂದ್ರಕಾಂತ ತಾರಳೆ, ಸಂಜಯ ಮೊಳವಾಡೆ, ರಾವಸಾಹೇಬ ಪಾಟೀಲ, ಸಮೀರ ಬಾಗೇವಾಡಿ, ಶೇಖರ ಪಾಟೀಲ, ಪ್ರವೀಣ ಪಾಟೀಲ, ಗಣೇಶ ಖಡೇದ, ವಿಟಿಯು ವಿಶೇಷಾಧಿಕಾರಿ ಪ್ರೊ. ಸಾಗರ ಹಾಲಬಾವಿ, ಪ್ರೊ. ಶ್ರೀಕಾಂತ ಅಂಬೇಕರ, ಡಿಪ್ಲೊಮಾ ಪ್ರಾಚಾರ್ಯ ಪ್ರೊ. ಬಸವರಾಜ ಕರೋಶಿ, ಪದವಿ ಪ್ರಾಚಾರ್ಯ ಚಿದಂಬರ ಜೋಶಿ, ಸಿಇಒ ಡಾ. ಸಿದ್ಧಗೌಡ ಪಾಟೀಲ, ಗಣಿತ ವಿಭಾಗದ ಮುಖ್ಯಸ್ಥ ಡಾ. ಪಿ.ಎಂ. ಮುತಾಲಿಕ ದೇಸಾಯಿ, ಪ್ರೊ.ಕವಿತಾ ವಸೇದಾರ, ಪ್ರೊ.ವಿಜಯಲಕ್ಷ್ಮೀ ಪಾಟೀಲ ಇತರರಿದ್ದರು.