ಜಿಲ್ಲೆ

ಡಿ.12ರಂದು ವಧು-ವರರ ಸಮಾವೇಶ

ಆರ್.ಕೃಷ್ಣ

ಮೈಸೂರು: ಬಲಿಜ ಸಂಘದಿಂದ ಡಿಸೆಂಬರ್ 12ರಂದು ನಗರದಲ್ಲಿ ಬಲಿಜ ವಧು-ವರರ ಸಮಾವೇಶ ಆಯೋಜಿಸಲಾಗಿದೆ ಎಂದು ಬಲಿಜ ಸಂಘದ ಕಾರ್ಯದರ್ಶಿ ಆರ್.ಮಂಜುನಾಥ್ ತಿಳಿಸಿದರು.

ಜಯನಗರದ ಶ್ರೀಕೃಷ್ಣ ದೇವರಾಯ ರಸ್ತೆಯಲ್ಲಿರುವ ಸಂಘದ ಆವರಣದಲ್ಲಿ ಅಂದು ಬೆಳಗ್ಗೆ 10 ಗಂಟೆಗೆ ಸಮಾವೇಶ ನಡೆಯಲಿದೆ. ಆಸಕ್ತ ವಧು-ವರರ ಪಾಲಕರು ನವೆಂಬರ್ 24ರ ಮುನ್ನ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಸಂಘದ ಕಚೇರಿ ಅಥವಾ ಸಂಘದ ಉಪಾಧ್ಯಕ್ಷ ಕೆ.ಲಿಂಗರಾಜು (ಮೊ: 9008912444) ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಉಪಾಧ್ಯಕ್ಷ ಕೆ.ಲಿಂಗರಾಜು, ಎಂ.ಎಸ್.ದಾಮೋದರ, ಎಂ.ಎಸ್.ಯೋಗೀಶ್ ಇತರರು ಇದ್ದರು.