ಜಿಲ್ಲೆ

ಆ.18 ರಂದು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಜಯಂತಿ

ಮೈಸೂರು: ಸುತ್ತೂರಿನ ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ 23ನೇ ಪೀಠಾಧಿಪತಿ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 107ನೇ ಜಯಂತಿಯನ್ನು ಆ.18 ರಂದು ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ಏರ್ಪಡಿಸಲಾಗಿದೆ.

ಆ.28 ರಂದು ಅಮೆರಿಕದ ಮೆರಿಲ್ಯಾಂಡ್‌ನಲ್ಲಿ ಗೇಥರ್ಸ್ ಬರ್ಗ್‌ನಲ್ಲಿರುವ ಜೆಎಸ್‌ಎಸ್ ಸ್ಪಿರಿಚ್ಯುಯಲ್ ಮಿಷನ್‌ನಲ್ಲಿ ಶ್ರೀಗಳ ಜಯಂತಿ ಹಾಗೂ ಅಲ್ಲಿ ನಿರ್ಮಾಣವಾಗಲಿರುವ ದೇವಸ್ಥಾನ ಹಾಗೂ ಅದಕ್ಕೆ ಹೊಂದಿಕೊಂಡಂತೆ ಸಭಾಭವನ ಸಂಕೀರ್ಣದ ಶಿಲಾನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.