ಜಿಲ್ಲೆ

ರಾಮಕೃಷ್ಣನಗರದ ನಟನ ರಂಗಶಾಲೆಯಲ್ಲಿ ಏ.7ರಂದು ಸ್ಥಾವರವೂ ಜಂಗಮ

ಮೈಸೂರು: ರಾಮಕೃಷ್ಣನಗರದ ನಟನ ರಂಗಶಾಲೆಯಲ್ಲಿ ಏ.7ರಂದು ಸಂಜೆ 6.30ಕ್ಕೆ ಸಾಹಿತಿ ಮಂಜುನಾಥ್ ಲತಾ ರಚನೆಯ ‘ಸ್ಥಾವರವೂ ಜಂಗಮ’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.

ನಟನ ರಂಗಶಾಲೆಯಲ್ಲಿ 2023-24ನೇ ಸಾಲಿನ ರಂಗಭೂಮಿ ಡಿಪ್ಲೊಮಾ ವಿದ್ಯಾರ್ಥಿಗಳ ಮೂರನೇ ಅಭ್ಯಾಸಿ ಪ್ರಯೋಗ ಇದಾಗಿದೆ. ಮಂಡ್ಯ ರಮೇಶ್ ನಿರ್ದೇಶಿಸಿದ್ದಾರೆ. ರಂಗರೂಪ ನಟನ ಮಂಜು ಹಾಗೂ ವಿನ್ಯಾಸ ನಟನ ರಂಗಶಾಲೆಯ ಪ್ರಾಂಶುಪಾಲ ಮೇಘ ಸಮೀರ ಅವರದ್ದು.