ಕುಷ್ಟಗಿಯ ತಹಸಿಲ್ ಕಚೇರಿಯಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಶ್ರುತಿ ಮಳ್ಳಪ್ಪಗೌಡ್ರ ಮಾತನಾಡಿದರು. ವಿವಿಧ ಅಧಿಕಾರಿಗಳು ಪಾಲ್ಗೊಂಡಿದ್ದರು. 
ಜಿಲ್ಲೆ

ಸೆ.23ರಂದು ವಿಶ್ವಕರ್ಮ ಜಯಂತಿ

Kopala - Desk - Eraveni

ಕುಷ್ಟಗಿ: ವಿವಿಧ ಸರ್ಕಾರಿ ಕಚೇರಿ ಸೇರಿ ಶಾಲೆ ಕಾಲೇಜುಗಳಲ್ಲಿ ವಿಶ್ವಕರ್ಮ ಜಯಂತಿ ಆಚರಿಸಬೇಕು ಎಂದು ತಹಸೀಲ್ದಾರ್ ಶ್ರುತಿ ಮಳ್ಳಪ್ಪಗೌಡ್ರ ಹೇಳಿದರು. ವಿಶ್ವಕರ್ಮ ಜಯಂತಿ ಆಚರಣೆ ಕುರಿತು ತಹಸಿಲ್ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಸೆ.17ರಂದು ಕಚೇರಿಯಲ್ಲಿ ಭಾವಚಿತ್ರ ಪೂಜೆಯೊಂದಿಗೆ ಜಯಂತಿ ಆಚರಿಸಲಾಗುತ್ತದೆ. ಸೆ.23ರಂದು ಸಮುದಾಯದವರೆಲ್ಲ ಸೇರಿ ಸಾರ್ವಜನಿಕವಾಗಿ ಆಚರಿಸಲು ನಿರ್ಧರಿಸಿರುವುದರಿಂದ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ಜಯಂತಿ ಆಚರಣೆಗೆ ತಾಲೂಕು ಆಡಳಿತದಿಂದ ಸಹಕಾರ ನೀಡಲಾಗುವುದು. ವಿವಿಧ ಕಚೇರಿಗಳಲ್ಲಿ ಆಚರಿಸುವ ಸಂಬಂಧ ತಾಪಂ ಇಒ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆಯಬೇಕು.

ಶಾಲೆಗಳಿಗೆ ಸಂಬಂಧಿಸಿದಂತೆ ಬಿಇಒ ಪತ್ರ ಬರೆದು ಕಡ್ಡಾಯವಾಗಿ ಆಚರಿಸುವಂತೆ ಸೂಚನೆ ನೀಡಬೇಕು. ತಹಸಿಲ್ ಕಚೇರಿಯಿಂದ ಕಾಳಿಕಾ ದೇವಸ್ಥಾನವರೆಗೆ ವಿಶ್ವಮಕರ್ಮರ ಭಾವಚಿತ್ರ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.