ಹೂವಿನಹಡಗಲಿ ತಾಲೂಕಿನ ಮಾನ್ಯರಮಸಲವಾಡ ಗ್ರಾಮದ ವೀರಭದ್ರೇಶ್ವರ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು. 
ಜಿಲ್ಲೆ

21ರಂದು ಅರಿವಿನ ಉಪನ್ಯಾಸ ಕಾರ್ಯಕ್ರಮ

ಹಗರಿಬೊಮ್ಮನಹಳ್ಳಿ: ತಾಲೂಕಿನ ಹಂಪಾಪಟ್ಟಣದಲ್ಲಿ ಶ್ರೀಶರಣ ಬಸವೇಶ್ವರ ಸೇವಾ ಹಾಗೂ ಸಾಂಸ್ಕೃತಿಕ ಟ್ರಸ್ಟ್‌ನಿಂದ ಹಮ್ಮಿಕೊಂಡಿದ್ದ ಮಹಾದಾಸೋಹಿ ಕಲಬುರಗಿ ಶರಣಬಸವೇಶ್ವರರ 20ನೇ ವರ್ಷದ ಪುರಾಣ ಕಾರ್ಯಕ್ರಮ ನಡೆಯುತ್ತಿದೆ.

ಫೆ.1ರಿಂದ ಆರಂಭವಾದ ಪುರಾಣ ಪ್ರವಚನ ಈಗಾಗಲೇ 10ದಿನ ಪೂರೈಸಿದೆ. ಬೆಳಗಾವಿಯ ಕಿತ್ತೂರು ಕುಳವಳ್ಳಿಯ ಯೋಗಾಶ್ರಮ ಸಂಸ್ಥೆಯ ಓಂ ಗುರುಜೀ, ಓಂ ಸುಕುಮಾರ ಇವರಿಂದ ಪ್ರವಚನ ನಡೆಯುತ್ತಿದೆ.

ಆಕಾಶವಾಣಿ ಕಲಾವಿದ ತಾಳಿಕೋಟೆಯ ದೀಪಕ್‌ಸಿಂಗ್ ಬಿ ಹಜೇರಿ, ರುಕ್ಮಾಪುರದ ಖ್ಯಾತ ತಬಲ ವಾದಕ ರಾಜಶೇಖರ ಗಜ್ಜೆ, ಡಾ.ಪುಟ್ಟರಾಜ ಗವಾಯಿಗಳ ಶಿಷ್ಯರಾದ ಡಾ.ನಾರಾಯಣ ಹಿರೇಕೊಳಚಿ ವಯಾಲೀನ್ ವಾದಕರಾಗಿ ಕಾರ್ಯಕ್ರಮ ನೆರವೇರಿಸುತಿದ್ದಾರೆ. ಪುರಾಣ ಮಂಗಲ ಫೆ.21ರಂದು ನಡೆಯಲಿದ್ದು, ನಾನಾ ಮಠಾಧೀಶರು, ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಆಗಮಿಸಲಿದ್ದಾರೆ.

ಕೊನೇ ದಿನವಾದ ಅಂದು ವಿದ್ವಾನ್ ಜಿ.ಎಸ್.ನಟೀಶ ಅವರಿಂದ ಅರಿವಿನ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನದ ಶಿವಾನಂದ ತಿಳಿಸಿದ್ದಾರೆ.