ಸುದ್ದಿಗೋಷ್ಠಿಯಲ್ಲಿ ಆರ್.ಎಸ್. ಮುತಾಲಿಕ ಮಾತನಾಡಿದರು. ಡಾ.ಆರ್. ಶೇಖ ಇದ್ದರು. 
ಜಿಲ್ಲೆ

16ರಂದು ಕೆಎಲ್‌ಎಸ್ ಐಎಂಇಆರ್ ಸಂಸ್ಥಾಪನಾ ದಿನ

ಶಂಕರ ಗೆಜ್ಜಿ

ಬೆಳಗಾವಿ: ಬೆಳಗಾವಿಯ ಕರ್ನಾಟಕ ಲಾ ಸೊಸೈಟಿಯ ಇನ್‌ಸ್ಟಿಟ್ಯೂಟ್ ಆ್ಮ್ಯಾ ನೇಜ್‌ಮೆಂಟ್ ಎಜ್ಯುಕೇಷನ್ ಆ್ಯಂಡ್ ರಿಸರ್ಚ್ (ಕೆಎಲ್‌ಎಸ್ ಐಎಂಇಆರ್)ನ 33ನೇ ಸಂಸ್ಥಾಪನಾ ದಿನಾಚರಣೆ ಸೆ.16ರಂದು ಸಂಜೆ 4.30ಕ್ಕೆ ಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೆಎಲ್‌ಎಸ್ ಐಎಂಇಆರ್ ಕಾಲೇಜು ಆಡಳಿತ ಮಂಡಳಿ ಚೇರ್ಮನ್ ಆರ್.ಎಸ್. ಮುತಾಲಿಕ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯ ಕೈಗಾರಿಕೋದ್ಯಮಿ ದಿ. ರಾವಸಾಹೇಬ ಗೋಗಟೆ ಅವರ 33ನೇ ಸಂಸ್ಥಾಪನಾ ದಿನ ಆಚರಿಸಲಾಗುವುದು ಎಂದರು. ಬೆಂಗಳೂರು ಐಐಎಂ ಪ್ರೊ. ಆರ್. ಶ್ರೀನಿವಾಸನ್ ಮುಖ್ಯ ಅತಿಥಿಯಾಗಿ ಆಗಮಿಸುವರು. ಬೆಳಗಾವಿ ಮೂಲದ ವಯವ್ಯ ಲ್ಯಾಬ್‌ನ ಸಿಇಒ ಹಾಗೂ ಸಹ ಸಂಸ್ಥಾಪಕ ರವಿ ಕೆ. ಪಾಟೀಲ ಅವರಿಗೆ ‘2023ರ ವಾಣಿಜ್ಯೋದ್ಯಮಿ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಉದಯೋನ್ಮುಖ ಉದ್ಯಮಿಗಳನ್ನು ಪ್ರೋತ್ಸಾಹಿಸುವುದು ಇದರ ಉದ್ದೇಶವಾಗಿದೆ ಎಂದರು.

ಕೆಎಲ್ಎಸ್ ಸಂಸ್ಥೆಯ ಅಧ್ಯಕ್ಷ ಅನಂತ ಮಂಡಗಿ ಅಧ್ಯಕ್ಷತೆ ವಹಿಸುವರು. ಕೆಎಲ್‌ಎಸ್ ಸಂಸ್ಥೆಯ ಬೋರ್ಡ್ ಆ್ ಮ್ಯಾನೇಜ್‌ಮೆಂಟ್ ಚೇರ್ಮನ್ ಪ್ರದೀಪ ಸಾವಕಾರ, ಕೆಎಲ್‌ಎಸ್ ಕಾರ್ಯದರ್ಶಿಗಳಾದ ವಿವೇಕ ಕುಲಕರ್ಣಿ ಮತ್ತು ಎಸ್.ವಿ. ಗಣಾಚಾರಿ ಉಪಸ್ಥಿತರಿರುವರು. ಉದಯೋನ್ಮುಖ ಉದ್ಯಮಿಗಳಿಗೂ ಅವಕಾಶವಿದೆ. ಆದ್ದರಿಂದ ಎಲ್ಲರೂ ಈ ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದರು. ಕೆಎಲ್‌ಎಸ್ ಐಎಂಇಆರ್ ನಿರ್ದೇಶಕ ಡಾ.ಆರ್. ಶೇಖ ಸುದ್ದಿಗೋಷ್ಠಿಯಲ್ಲಿದ್ದರು.