ಸಂಕೇಶ್ವರ: ಗ್ರಾಮೀಣ ಕ್ರೀಡೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಸಂಕ್ರಾಂತಿ ನಿಮಿತ್ತ ಜ.14ರಂದು ಗಾಳಿಪಟ ಸ್ಪರ್ಧೆ ಆಯೋಜನೆ ಮಾಡಲಾಗಿದೆ ಎಂದು ಪತ್ರಕರ್ತರ ಸಂಘದ ಸಂಕೇಶ್ವರ ಘಟಕದ ಅಧ್ಯಕ್ಷ ಕುಮಾರ ಗುಡಸಿ ಹೇಳಿದರು.
ಪಟ್ಟಣದಲ್ಲಿ ಈಚೆಗೆ ಪವನ ಕಣಗಲಿ ೌಂಡೇಷನ್ ವತಿಯಿಂದ ಹಮ್ಮಿಕೊಂಡಿರುವ 5ನೇ ವರ್ಷದ ಗಾಳಿಪಟ ತಯಾರಿಸುವ ಮತ್ತು ಹಾರಿಸುವ ಸ್ಪರ್ಧೆಯ ಲೋಗೋ ಅನಾವರಣಗೊಳಿಸಿ ಮಾತನಾಡಿದರು.
ಆಯೋಜಕ ಪವನ ಕಣಗಲಿ ಹಾಗೂ ಡಾ.ಸ್ಮತಿ ಹವಳ ಮಾತನಾಡಿ, ಗಾಳಿಪಟ ಸಂಸ್ಕೃತಿ ಪ್ರೋತ್ಸಾಹಿಸುವ ಉದ್ದೇಶದಿಂದ ಗಾಳಿಪಟ ತಯಾರಿಸುವ ಮತ್ತು ಹಾರಿಸುವ ಎರಡು ಪ್ರತ್ಯೇಕ ವಿಭಾಗ ಮಾಡಲಾಗಿದ್ದು, 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ ಎಂದರು. ಗಾಳಿಪಟ ಹಾರಿಸುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ 7,001, ದ್ವಿತೀಯ ಬಹುಮಾನ 5,001, ತೃತೀಯ ಬಹುಮಾನ 3,001 ಹಾಗೂ ತಲಾ 1,001ರಂತೆ ಮೂರು ಸಮಾಧಾಕರ ಬಹುಮಾನಗಳಿವೆ.
ಗಾಳಿಪಟ ತಯಾರಿಸುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ 5,001, ದ್ವಿತೀಯ 3,001, ತೃತೀಯ 2,001 ಹಾಗೂ 1,001 ರೂ. ಎರಡು ಸಮಾಧಾನಕರ ಬಹುಮಾನ, ಭಾಗವಹಿಸುವ ಎಲ್ಲ ಸ್ಪರ್ಧಾಳುಗಳಿಗೆ ನೆನಪಿನ ಕಾಣಿಕೆ ಮತ್ತು ಪ್ರಮಾಣ ವಿತ್ರ ವಿತರಿಸಲಾಗುವುದು. ಸ್ಪರ್ಧಾಗಳು ಸ್ವತಃ ತಾವೇ ತಯಾರಿಸಿರುವ ಗಾಳಿಪಟ ಮಾತ್ರ ಹಾರಿಸಲು ಅವಕಾಶ ಇರಲಿದೆ. ಮಾಹಿತಿಗಾಗಿ ಮೊ.ನಂ 9343751143 ಸಂಪರ್ಕಿಸಬಹುದು ಎಂದರು. ಪೀಪಲ್ಸ್ ಕೋ-ಆಪ್ ಸೊಸೈಟಿ ವ್ಯವಸ್ಥಾಪಕ ಶ್ಯಾಮಲಿಂಗ ಹಾಲಟ್ಟಿ, ಸಂದೀಪ ಮಹಾಳಂಕ ಇದ್ದರು.