ಮೈಸೂರು: ‘ಮುಗ್ಧ ಮನಸ್ಸು’ ಚಲನಚಿತ್ರ ಏ.12 ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಆರ್.ಸಿ.ರಂಗಶೇಖರ್ ಹೇಳಿದರು.
ಚಿತ್ರದ ನಾಯಕನಾಗಿ ಮೋಹನ್, ನಾಯಕಿಯಾಗಿ ಮಾನ್ಯ ನಟಿಸಿದ್ದು, ಪ್ರೀತಿಯನ್ನು ಕೊನೆವರೆಗೂ ಹೇಗೆ ಉಳಿಸಿಕೊಂಡು ಹೋಗಬಹುದು ಎಂಬ ಎಳೆಯ ಮೇಲೆ ಚಿತ್ರ ಸಾಗುತ್ತದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹೊಸ ಕಲಾವಿದರಿಗೆ ಅವಕಾಶ ನೀಡಲಾಗಿದೆ. ಐದು ಅತ್ಯುತ್ತಮ ಹಾಡುಗಳಿವೆ. ಅಲ್ಲದೆ 50ಕ್ಕೂ ಹೆಚ್ಚು ರಂಗಭೂಮಿ ಕಲಾವಿದರು ನಟಿಸಿದ್ದಾರೆ. ಇದೊಂದು ಕಾಲ್ಪನಿಕ ಕಥೆ ಆಧರಿಸಿದ ಚಿತ್ರ ಎಂದು ಮಾಹಿತಿ ನೀಡಿದರು.
ನಿರ್ಮಾಪಕ ವೆಂಕಟೇಶ್, ಚಿತ್ರ ತಂಡದ ಭೈರೇಗೌಡ, ಲೋಕೇಶ್ ಇದ್ದರು.