ಮುದ್ದೇಬಿಹಾಳ: ಪಟ್ಟಣದ ಪುರಸಭೆಯ ಅಧ್ಯ, ಉಪಾಧ್ಯರ ಆಯ್ಕೆ ಪ್ರಕ್ರಿಯೆ ನಡೆಸಲು ಸೆ.11 ರಂದು ದಿನಾಂಕ ನಿಗದಿಪಡಿಸಿ ಚುನಾವಣಾಧಿಕಾರಿ, ತಹಸೀಲ್ದಾರ್ ಬಲರಾಮ ಕಟ್ಟಿಮನಿ ಮಂಗಳವಾರ ಆದೇಶ ಹೊರಡಿಸಿದ್ದಾರೆ. ಅಧ್ಯ ಸ್ಥಾನ ಸಾಮಾನ್ಯರಿಗೆ, ಉಪಾಧ್ಯ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.
ಅಂದು ಪುರಸಭೆ ಕಚೇರಿಯಲ್ಲಿ ಬೆಳಗ್ಗೆ 9 ರಿಂದ 11ರವರೆಗೆ ನಾಮಪತ್ರ ಸ್ವೀಕಾರ, 11 ರಿಂದ 11&30ರವರೆಗೆ ನಾಮಪತ್ರಗಳ ಪರಿಶೀಲನೆ, 11&30 ರಿಂದ 12 ರವರೆಗೆ ಹಿಂತೆಗೆದುಕೊಳ್ಳುವಿಕೆ, ನಂತರ ಅಗತ್ಯ ಬಿದ್ದಲ್ಲಿ ಮಧ್ಯಾಹ್ನ 12&30ಕ್ಕೆ ಚುನಾವಣೆ ನಡೆಸಲಾಗುತ್ತದೆ. ಪುರಸಭೆಯಲ್ಲಿರುವ 23 ಸದಸ್ಯರಲ್ಲಿ ಕಾಂಗ್ರೆಸ್ 8, ಬಿಜೆಪಿ 8, ಜೆಡಿಎಸ್ 2, ಪೇತರ 5 ಸದಸ್ಯರಿದ್ದಾರೆ.
ಕಳೆದ ಅವಧಿಯಲ್ಲಿ ಕಾಂಗ್ರೆಸ್ ಮತ್ತು ಪೇತರರ ಬೆಂಬಲದೊಂದಿಗೆ ಜೆಡಿಎಸ್ನ ಪ್ರತಿಭಾ ಅಂಗಡಗೇರಿ ಅಧ್ಯರಾಗಿದ್ದರು. ಅಧ್ಯ ಸ್ಥಾನದ ಆಯ್ಕೆಯಲ್ಲಿ ಪೇತರರು ಪ್ರಮುಖ ಪಾತ್ರ ವಹಿಸಲಿದ್ದಾರೆ. ಹಿಂದಿನಂತೆ ಈ ಬಾರಿಯೂ ಜೆಡಿಎಸ್, ಪೇತರರು ಕಾಂಗ್ರೆಸ್ ಪರ ಒಲವು ಹೊಂದಿದ್ದು ಈ ಬಾರಿಯೂ ಕಾಂಗ್ರೆಸ್ ಸದಸ್ಯರೇ ಅಧಿಕಾರದ ಚುಕ್ಕಾಣಿ ಹಿಡಿಯುವ ನಿರೀೆ ಇದೆ.