ಮಡಿಕೇರಿ:
ಇಲ್ಲಿನ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಬುಧವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಈ ಹಿನ್ನೆಲೆಯಲ್ಲಿ ಬೆಳಗ್ಗೆ 9.30ರಿಂದ ಮಧ್ಯಾಹ್ನ 12 ಗಂಟೆ ತನಕ ಸಾರ್ವಜನಿಕರಿಗೆ ಏವರ ದರ್ಶನದ ಅವಕಾಶ ಮಾಡಿಕೊಡಲಾಗಿತ್ತು. ಈ ಸಂದರ್ಭ ಭಕ್ತಾಧಿಗಳು ವಿಶೇಷ ಸೇವೆ, ರುದ್ರಹೋಮ, ಏಕಾದಶ ರುದ್ರಾಭಿಷೇಕ ಹಾಗೂ ಅಲಂಕಾರ ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ ನಡೆಯಿತು. ಬಳಿಕ ವಿವಿಧ ಪೂಜೆ-ಅರ್ಚನೆ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ದಿನಪೂರ್ತಿ ದೇಗವಾಲಯ ತೆರೆದು ಭಕ್ತರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಶಿವರಾತ್ರಿ ಹಿನ್ನೆಲೆಯಲ್ಲಿ ನಾಣ್ಯ ಮತ್ತು ನೋಟುಗಳಿಂದ ಮಾಡಿದ್ದ ವಿಶೇಷ ಶಿವಲಿಂಗ ಭಕ್ತರ ಗಮನ ಸೆಳೆಯಿತು. 10 ರೂ. ನಾಣ್ಯ, ನೋಟು, 20, 50, 100, 200 ಹಾಗೂ 500 ರೂ. ನೋಟುಗಳನ್ನು ಬಳಸಿ ಈ ಶಿವಲಿಂಗ ರಚಿಸಲಾಗಿತ್ತು.