ಜಿಲ್ಲೆ

ಪಾಲಬಾವಿ ಸೊಸೈಟಿಯಲ್ಲಿ ಕಳ್ಳತನ

ಪಾಲಬಾವಿ: ರಾಯಬಾಗ ತಾಲೂಕಿನ ಪಾಲಬಾವಿ ಓಂಕಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸೊಸೈಟಿ ಕಟ್ಟಡದ ಹೆಂಚು ತೆಗೆದು ಕಳ್ಳತನ ಮಾಡಿದ ಘಟನೆ ಬುಧವಾರ ತಡ ರಾತ್ರಿ ಗ್ರಾಮದಲ್ಲಿ ಜರುಗಿದೆ.

ಸೊಸೈಟಿಯ ಡ್ರಾ ಹಾಗೂ ಕಪಾಟು ಮುರಿದು ನಗದು ಪುಸ್ತಕ, ನಡಾವಳಿ ಪುಸ್ತಕ ಹಾಗೂ ಅಗತ್ಯ ದಾಖಲೆ ಮತ್ತು 3,500 ರೂ. ಕಳವು ಮಾಡಿದ್ದಾರೆ ಎಂದು ಸಂಘದ ಮುಖ್ಯ ಕಾರ್ಯನಿರ್ವಾಹಕ ಪ್ರಭಾಕರ ಕುರಬೆಟ್ಟಿ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಹಾರೂಗೇರಿ ಪೊಲೀಸ್ ಠಾಣೆ ಪಿಎಸ್‌ಐ ಆರ್.ಆರ್. ಕಂಗನೂಳಿ ಭೇಟಿ ನೀಡಿ ಪರಿಶೀಲಿಸಿದರು. ವಿದ್ಯುತ್ ತಗುಲಿ ರೈತ ಸಾವು