ರೇವತಗಾಂವ ಗ್ರಾಮದ ಶ್ರೀ ರೇವಣ ಸಿದ್ಧೇಶ್ವರ ಜಾತ್ರಾ ನಿಮಿತ್ತ ಹಮ್ಮಿಕೊಂಡಿದ್ದ ಟೆನಿಸ್​ ಬಾಲ್​ ಕ್ರಿಕೆಟ್​ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಚಡಚಣ ಓಂ ಸಾಯಿ ಕ್ರಿಕೆಟ್​ ತಂಡಕ್ಕೆ ಉದಯ ಕಾರಜೋಳ ಬಹುಮಾನ ವಿತರಿಸಲಾಯಿತು. ಚೇತನ ನಿರಾಳೆ, ಮಹಾದೇವ ಹಿರೇಕುರಬರ ಇತರರಿದ್ದರು. 
ಜಿಲ್ಲೆ

ಓಂ ಸಾಯಿ ಕ್ರಿಕೆಟ್​ ತಂಡ ಪ್ರಥಮ

ಗಿರೀಶ ಸಗರ

ರೇವತಗಾಂವ: ಉತ್ತಮ ಆರೋಗ್ಯಕ್ಕೆ ಕ್ರೀಡೆ ಅತ್ಯಂತ ಅವಶ್ಯಕ. ಕ್ರೀಡಾಕೂಟಗಳಿಂದ ಯುವಕರಲ್ಲಿ ಸೌಹಾರ್ದತೆ, ಸ್ನೇಹ ವೃದ್ಧಿಯಾಗುತ್ತದೆ ಎಂದು ಉದಯ ಕಾರಜೋಳ ಹೇಳಿದರು.

ಗ್ರಾಮದ ಶ್ರೀ ರೇವಣ ಸಿದ್ಧೇಶ್ವರ ಜಾತ್ರೆ ನಿಮಿತ್ತ ಯಂಗ್​ ಸ್ಟಾರ್​ ಕ್ರಿಕೆಟ್​ ಕ್ಲಬ್​ ವತಿಯಿಂದ ಹಮ್ಮಿಕೊಂಡಿದ್ದ ಟೆನಿಸ್​ ಬಾಲ್​ ಕ್ರಿಕೆಟ್​ ಪಂದ್ಯಾವಳಿಯಲ್ಲಿ ಗೆದ್ದ ತಂಡಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಚಡಚಣದ ಓಂ ಸಾಯಿ ಕ್ರಿಕೆಟ್​ ತಂಡ ಮೊದಲ ಸ್ಥಾನ ಪಡೆದು 31,000 ಹಾಗೂ ಟ್ರೋಫಿ, ರೇವತಗಾಂವ ಗ್ರಾಮದ ಯಂಗ್​ ಸ್ಟಾರ್​ ಕ್ರಿಕೆಟ್​ ತಂಡ ದ್ವೀತಿಯ ಸ್ಥಾನ ಪಡೆದು 21,000 ಹಾಗೂ ಚಡಚಣದ ಯಂಗ್​ ಸ್ಟಾರ್​ ಕಿಕೆಟ್​ ತಂಡ ತತೀಯ ಸ್ಥಾನ ಪಡೆದು 11,000 ಹಾಗೂ ಟ್ರೋಫಿ ಪಡೆಯಿತು. ಉತ್ತಮ ಬ್ಯಾಟ್ಸ್​ಮನ್​ ಹಾಗೂ ಉತ್ತಮ ಬೌಲರ್​ಗಳಿಗೆ ಬಹುಮಾನ ವಿತರಿಸಲಾಯಿತು.

ಚಡಚಣ ಪಪಂ ಸದಸ್ಯರಾದ ಚೇತನ ನಿರಾಳೆ, ಮಹಾದೇವ ಹಿರೇಕುರಬರ, ಗ್ರಾಪಂ ಸದಸ್ಯ ರೇವಣಸಿದ್ಧ ಜಾಬಗೋಂಡೆ, ಶಂಕ್ರಪ್ಪ ಗೋಟ್ಯಾಳ, ಅಮಸಿದ್ದ ದೆವಾಡಿ, ಕಲ್ಲಪ್ಪ ಉಟಗಿ, ರವಿ ಕೆಂಗಾರ, ರಾಮಣ್ಣ ನಡಗೇರಿ, ಸಿದ್ದರಾಮ ಪೊದ್ದಾರ, ನೀಲಕಂಠ ಬಿರಾದಾರ, ಯಲ್ಲಪ್ಪ ಬಿರುಣಗಿ, ಅಶೋಕ ಬಿಜ್ಜರಗಿ, ಲಕ್ಷ$್ಮಣ ತೇಲಿ, ಇತರ ಕ್ರೀಡಾಭಿಮಾನಿಗಳು ಇದ್ದರು.