ಅಂಗವಿಕಲರಿಗೆ ಮತ್ತು ವೃದ್ಧರಿಗೆ ಮಾಸಾಶನ ರೂಪದ ವೇತನವನ್ನು ಮಂಜೂರು ಮಾಡುವಂತೆ ಸಿರಗುಪ್ಪ ತಾಲೂಕಿನ ಬೂದುಗುಪ್ಪ ಗ್ರಾಮದ ಅಂಗವಿಕಲರು ಮತ್ತು ವೃದ್ಧರು ಒತ್ತಾಯಿಸಿ ಗ್ರೇಡ್-2ತಹಸೀಲ್ದಾರ್ ವಿಶ್ವನಾಥಗೆ ಗುರುವಾರ ಮನವಿ ಸಲ್ಲಿಸಿದರು. 
ಜಿಲ್ಲೆ

ವೃದ್ಧಾಪ್ಯ, ಅಂಗವಿಕಲರ ವೇತನ ಪಾವತಿಸುವಂತೆ ಬೂದುಗುಪ್ಪ ಗ್ರಾಮದ ಅಂಗವಿಕಲರು, ವೃದ್ಧರ ಮನವಿ

ಸಿರಗುಪ್ಪ: ಬಾಕಿ ಉಳಿಸಿಕೊಂಡ 10 ತಿಂಗಳಿನ ವೇತನವನ್ನು ಮಂಜೂರು ಮಾಡುವಂತೆ ಒತ್ತಾಯಿಸಿ ತಾಲೂಕಿನ ಬೂದುಗುಪ್ಪ ಗ್ರಾಮದ ಅಂಗವಿಕಲರು ಮತ್ತು ವೃದ್ಧ್ದರು ಗ್ರೇಡ್-2 ತಹಸೀಲ್ದಾರ್ ವಿಶ್ವನಾಥಗೆ ಗುರುವಾರ ಮನವಿ ಸಲ್ಲಿಸಿದರು.

ವೃದ್ಧ್ದೆ ಶಿವಮ್ಮ ಮಾತನಾಡಿ, ಸರ್ಕಾರ, 10 ತಿಂಗಳಿನಿಂದ ವೃದ್ಧ್ದಾಪ್ಯ ವೇತನ ಪಾವತಿಸಿಲ್ಲ. ಸರ್ಕಾರ ನೀಡುವ ವೇತನವನ್ನೇ ನಂಬಿಕೊಂಡು ಬದುಕುತ್ತಿರುವ ಫಲುಭವಿಗಳಿಗೆ ತುಂಬಾ ತೊಂದರೆಯಾಗಿದೆ. ಊಟಕ್ಕೆ ಮತ್ತು ಔಷಧಗಳನ್ನು ಪಡೆಯಲು ತೀವ್ರ ತೊಂದರೆಯಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೆ ವೃದ್ದಾಪ್ಯ ಮತ್ತು ಅಂಗವಿಕಲರ ವೇತನವನ್ನು ಪಾವತಿಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅಂಗವಿಕಲರು ಮತ್ತು ವೃದ್ಧ್ದರಾದ ಮಾಳಮ್ಮ, ಸೋಮಶೇಖರ, ಜಯಮ್ಮ, ಈರಮ್ಮ, ಸರಸಮ್ಮ, ವನ್ನಮ್ಮ, ತಿಮ್ಮಕ್ಕ, ಪದ್ದಮ್ಮ, ಮಲ್ಲಮ್ಮ,ಗಂಗಪ್ಪ, ಮುದಿಯಪ್ಪ, ನೀಲಮ್ಮ ಇತರರಿದ್ದರು.