ಬಲ್ಲಮಾವಟ್ಟಿ ವೃತ್ತದ ಹಳೇತಾಲೂಕು ಅಂಗನವಾಡಿ ಕೇಂದ್ರದ ಗ್ರಾಜುಯೇಷನ್ ಡೇ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಜಾನಪದ ಕಲೆಯಲ್ಲಿ ಪ್ರವೀಣತೆ ಪಡೆದ, ಬೊಪ್ಪಂಡ ಬೊಳ್ಳಮ್ಮ ನಾಣ್ಣಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. 
ಜಿಲ್ಲೆ

ಹಳೇ ತಾಲೂಕು ಅಂಗನವಾಡಿ ವಾರ್ಷಿಕೋತ್ಸವ

ಲೋಕೇಶ್ ಮನು. ಡಿ

ನಾಪೋಕ್ಲು: ಇಲ್ಲಿನ ಭಗವತಿ ದೇವಾಲಯದ ಸಭಾಂಗಣದಲ್ಲಿ ಬಲ್ಲಮಾವಟ್ಟಿ ವೃತ್ತದ ಹಳೇ ತಾಲೂಕು ಅಂಗನವಾಡಿ ಕೇಂದ್ರದ ಗ್ರಾೃಜುಯೇಷನ್ ಡೇ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಟರಾಜ್ ಮಾತನಾಡಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಭಾಗ್ಯವತಿ ಗ್ರಾಪಂ ಸದಸ್ಯರು, ಪಾಲಕರು, ದಾನಿಗಳ ಸಹಕಾರ ಪಡೆದು ಅಂಗನವಾಡಿ ಕೇಂದ್ರ ಉತ್ತಮ ಮಟ್ಟದಲ್ಲಿ ನಡೆಸುತ್ತಿದ್ದಾರೆ. ಇವರು ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ರಾಷ್ಟ್ರ ಮಟ್ಟದ ಪ್ರಶಸ್ತಿ ಗಳಿಸುವಂತಾಗಲಿ ಎಂದು ಆಶಿಸಿದರು.

ಪುನಶ್ಚೇತನ ಸಂಸ್ಥೆಯ ಅಧ್ಯಕ್ಷರಾ ಬಾಲೆಯಡ ದಿವ್ಯ ಮಂದಪ್ಪ, ಜಾನಪದ ಕಲೆಯಲ್ಲಿ ಪ್ರವೀಣತೆ ಪಡೆದ ಬೊಪ್ಪಂಡ ಬೊಳ್ಳಮ್ಮ ನಾಣ್ಣಯ್ಯ, ಬೊಪ್ಪಂಡ ಯಶೋದಾ, ಶೌರ್ಯ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಮಕ್ಕಳಿಗೆ ವಿವಿಧ ಆಟೋ ಸ್ಪರ್ಧೆ, ಬರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ಹಿರಿಯರಿಗೆ ಕ್ರೀಡಾಕೂಟ ಆಯೋಜಿಸಲಾಗಿತ್ತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ನಿವೃತ್ತ ಪ್ರೊ. ಕಲ್ಯಾಣ ಪೋಣಚ್ಚ ದೀಪ ಬೆಳಗಿಸಿ ಕಾರ್ಯಕ್ರಮ ್ನು ಉದ್ಘಾಟಿಸಿದರು. ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯುವರಾಜ್ ಮೇಪಡಂಡ ಸವಿತಾ ಕೀರ್ತನ್, ತಾಲೂಕು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಸೀತಾಲಕ್ಷ್ಮೀ, ದಂತ ವೈದ್ಯೆ ನೂರ್ ಫಾತಿಮಾ, ಬಾಲ ವಿಕಾಸ ಸಮಿತಿ ಸದಸ್ಯರು, ದಾನಿಗಳು, ಪಾಲಕರು ಇದ್ದರು.